ನವ ದೆಹಲಿ : ಟ್ವೀಟರ್ ನಂತೆ ಸದ್ಯ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪೋಸ್ಟ್ ಮಾಡಿದ್ದು ದೆಹಲಿಯಲ್ಲಿ ಅತ್ಯಾಚಾರ ಮತ್ತು ಕೊಲೆಯಾಗಿದ್ದ ಒಂಬತ್ತು ವರ್ಷದ ಬಾಲಕಿಯ ಪೋಷಕರ ಫೋಟೋವನ್ನು ತೆಗೆದು ಹಾಕಿದೆ.
ಆಗಸ್ಟ್ 1 ರಂದು, ದೆಹಲಿಯಲ್ಲಿ ಒಂಬತ್ತು ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ಮತ್ತು ಬಲವಂತವಾಗಿ ಅಂತ್ಯಸಂಸ್ಕಾರ ಮಾಡಲಾಯಿತು, ಇದು ವ್ಯಾಪಕ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿತ್ತು.
ಘಟನೆಯ ನಂತರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿದರು ಮತ್ತು ನಂತರ ಅವರೊಂದಿಗೆ ತೆಗೆಸಿಕೊಂಡಿದ್ದ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು. ವಾರದ ಆರಂಭದಲ್ಲಿ, ಫೇಸ್ ಬುಕ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗೆ ನೋಟಿಸ್ ನೀಡಿ, ಪೋಸ್ಟ್ ನನ್ನು ತೆಗೆಯುವಂತೆ ಹೇಳಿತ್ತು.
ತನ್ನ ಪತ್ರದಲ್ಲಿ, “ನಿಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ನೀವು ಅಪ್ಲೋಡ್ ಮಾಡಿದ ಪೋಸ್ಟ್ ಕಾನೂನುಬಾಹಿರವಾಗಿದ್ದು ಎಂದು ಉಲ್ಲೇಖಿಸಿದೆ. ಈ ಹಿಂದೆ ಟ್ವೀಟರ್ ಸಂಸ್ಥೆ ಕೂಡ ಇದೆ ಕಾರಣಕ್ಕೆ ರಾಗಾ ಅವರ ಟ್ವೀಟರ್ ಅಧಿಕೃತ ಖಾತೆಯನ್ನು ಬ್ಲಾಕ್ ಮಾಡಿತ್ತು.
PublicNext
20/08/2021 06:11 pm