ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ : ಕುರುಬ ಸಮುದಾಯಕ್ಕೆ ಎಸ್. ಟಿ. ಮೀಸಲಾತಿ ನೀಡಿ: ಕೇಂದ್ರ ಸಚಿವರಿಗೆ ನಿರಂಜನಾನಂದ ಶ್ರೀಗಳ ಬೇಡಿಕೆ...!

ದಾವಣಗೆರೆ : ಹರಿಹರ ತಾಲೂಕಿನ ಬೆಳ್ಳೂಡಿ ಸಮೀಪದ ಕಾಗಿನೆಲೆ ಶಾಖಾ ಮಠಕ್ಕೆ ಕೇಂದ್ರ ಸಚಿವ ನಾರಾಯಣಸ್ವಾಮಿ ಅವರು ಭೇಟಿ ಮಾಡಿದರು‌‌‌. ಈ ವೇಳೆ ಎಸ್. ಟಿ. ಮೀಸಲಾತಿ ನೀಡುವ ಸಂಬಂಧ ಶ್ರೀಗಳ ಜೊತೆ ಸಮಾಲೋಚನೆ ನಡೆಸಿದರು.

ಕೇಂದ್ರ ಸಚಿವರಾದ ನಂತರ ಮೊದಲ ಬಾರಿಗೆ ಭೇಟಿ ನೀಡಿದ ನಾರಾಯಣಸ್ವಾಮಿ ಇಂದು ಕಾಗಿನಲೆ ನಿರಂಜನಾನಂದ ಸ್ವಾಮೀಜಿ ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ವೇಳೆ ಕುರುಬ ಸಮಾಜಕ್ಕೆ ಎಸ್ ಟಿ ಮೀಸಲಾತಿ ನೀಡುವ ಕುರಿತು ರಾಜ್ಯ ಸರ್ಕಾರ ಕ್ಕೆ ವರದಿ ನೀಡಿದ್ದು, ನಂತರ ನೀವು ಕೇಂದ್ರ ಸರ್ಕಾರದ ಮಟ್ಟದಲ್ಲಿ ಸಹಾಯ ಮಾಡಬೇಕು ಎಂದು ಸ್ವಾಮೀಜಿ ಅವರು ಕೇಂದ್ರ ಸಚಿವರಲ್ಲಿ ಮನವಿ ಮಾಡಿದರು.

ಸ್ವಾಮೀಜಿಯವರ ಮನವಿಗೆ ಸಹಮತ ವ್ಯಕ್ತಪಡಿಸಿದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ ನಾರಾಯಣಸ್ವಾಮಿ ತಮ್ಮ‌ ಕೈಯಲ್ಲಾದಷ್ಟು ಪ್ರಯತ್ನ ಮಾಡುವುದಾಗಿ ತಿಳಿಸಿದರು‌. ಈ ಹಿಂದೆ ರಾಜ್ಯದಲ್ಲಿ ಸಮಾಜಕಲ್ಯಾಣ ಇಲಾಖೆ ಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಒಳ್ಳೆ ಕೆಲಸ ಮಾಡಿದ್ದಾರೆ ಎಂದು ಕೇಂದ್ರ ಸಚಿವರನ್ನು ಹೊಗಳಿದ ಕಾಗಿನಲೆ ಸ್ವಾಮೀಜಿ ಅವರು, ಕೇಂದ್ರ ಸರ್ಕಾರದಲ್ಲೂ ಒಳ್ಳೆ ಕೆಲಸ ಮಾಡಿ ಒಳ್ಳೆ ಹೆಸರು‌ ಮಾಡಿ ಎಂದು ಹಾರೈಸಿದರು. ಇದೇ ವೇಳೆ ಕೇಂದ್ರ ಸಚಿವರನ್ನು ಕಾಗಿನಲೆ ಸ್ವಾಮೀಜಿ ಸನ್ಮಾನಿಸಿದರು.

ಕೇವಲ ಭರವಸೆ ಮಾತ್ರ ಇದುವರೆಗೆ ಸಿಕ್ಕಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಕುರುಬ ಸಮುದಾಯವನ್ನು ಎಸ್ ಟಿ ಸೇರ್ಪಡೆ ಮಾಡುವಂತೆ ಹೋರಾಟವನ್ನೂ ಮಾಡಿದ್ದೇವೆ. ಆದ್ರೆ ನಮ್ಮ ಹೋರಾಟ ಶಾಂತಿಯುತವಾಗಿದೆ. ಇದು ಉಗ್ರ ಸ್ವರೂಪ ಪಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ. ಕೆ. ಎಸ್. ಈಶ್ವರಪ್ಪ ಸಹ ಹೋರಾಟಕ್ಕೆ ಎಲ್ಲಾ ರೀತಿಯ ಸಹಕಾರ ಕೊಟ್ಟಿದ್ದಾರೆ. ಆದಷ್ಟು ಬೇಗ ಬೇಡಿಕೆ ಈಡೇರಿಸಿ ಎಂದು ಶ್ರೀಗಳು ಮನವಿ ಮಾಡಿದರು.

Edited By : Shivu K
PublicNext

PublicNext

19/08/2021 02:02 pm

Cinque Terre

48.04 K

Cinque Terre

1

ಸಂಬಂಧಿತ ಸುದ್ದಿ