ಹಾಸನ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಎದುರೇ ವ್ಯಕ್ತಿಯೋರ್ವ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಜೈಕಾರ ಕೂಗಿದ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನಲ್ಲಿ ನಡೆದಿದೆ.
ಹೊಳೆನರಸೀಪುರ ತಾಲೂಕಿನ ದೊಡ್ಡಹಳ್ಳಿ ಗ್ರಾಮಕ್ಕೆ ಇಂದು ಶೋಭಾ ಕರಂದ್ಲಾಜೆ ಆಗಮಿಸಿದರು. ಈ ವೇಳೆ ಅವರನ್ನು ನೂರಾರು ಕಾರ್ಯಕರ್ತರು ಅವರಿಗೆ ಸ್ವಾಗತ ಕೋರಿದರು. ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬ ಕೇಂದ್ರ ಸಚಿವರ ಎದುರೇ ಸಿದ್ದರಾಮಯ್ಯ ಅವರಿಗೆ ಜೈಕಾರ ಕೂಗಿದ್ದಾನೆ. ಇದರಿಂದಾಗಿ ಜೈಕಾರ ಕೂಗಿದವನಿಗೆ ತಕ್ಷಣ ಗ್ರಾಮಸ್ಥರೇ ತರಾಟೆಗೆ ತೆಗೆದುಕೊಂಡರು.
ಘಟನೆಯಿಂದ ಕಸಿವಿಸಿಗೊಂಡ ಸಚಿವೆ ಶೋಭಾ ಕರಂದ್ಲಾಜೆ ಅವರು ಇದ್ಯಾವುದಕ್ಕೂ ಲೆಕ್ಕಿಸದೆ ಕಾರು ಹತ್ತಿ ಹೊರಟರು. ಗ್ರಾಮಸ್ಥರು ತಿಳಿಹೇಳಿದರೂ ತನ್ನ ಆಕ್ರೋಶ ಮುಂದುವರಿಸಿದ ವ್ಯಕ್ತಿ, ಸಿದ್ದರಾಮಯ್ಯ ಅನ್ನಭಾಗ್ಯದ ಮೂಲಕ ಬಡವರಿಗೆ ಆಹಾರ ನೀಡಿದರು. ಆದರೆ ಇವರು ಏನು ಮಾಡಿದ್ದಾರೆ? ಕೊಡುವ ಅಕ್ಕಿಯಲ್ಲೂ ಹೆಚ್ಚು ಹಣ ಕೇಳುತ್ತಾರೆ ಎಂದು ಆಕ್ರೋಶ ಹೊರಹಾಕಿದರು.
PublicNext
17/08/2021 07:11 pm