ಸಿದ್ದರಾಮಯ್ಯ ಬಾಯಲ್ಲಿ ಉಲ್ಟಾ ಮಚ್ಚೆ ಇದೆ. ಅವರು ಹೇಳಿದ್ದು ಯಾವಾಗಲೂ ಉಲ್ಟಾನೇ ಆಗುತ್ತೆ ಎಂದು ಸಿ.ಟಿ ರವಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು’ಅಪ್ಪನಾಣೆ ಮೋದಿ ಪ್ರಧಾನಿ ಆಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಮೋದಿ 2 ಬಾರಿ ಪ್ರಧಾನಿ ಆಗಿದ್ದಾರೆ.
ನಾನು ಮತ್ತೆ ಅಧಿಕಾರಕ್ಕೆ ಬಂದೇ ಬರ್ತೀನಿ ಅಂದಿದ್ರು. ಬಂದ್ರಾ.? ಬಿಜೆಪಿ ಅಧಿಕಾರಲ್ಲ ಬರಲ್ಲ ಅಂದರೆ ಬರುತ್ತೆ ಅಂತಾನೆ ಅರ್ಥ. ಹಾಗಾಗಿ ಅವರು ಹೇಳಿದ್ದೆಲ್ಲವೂ ಉಲ್ಟಾ ಆಗುತ್ತೆ’ ಎಂದು ಸಿ. ಟಿ ರವಿ ವ್ಯಂಗ್ಯವಾಡಿದ್ದಾರೆ. ಇದೇ ಮಾತಿಗೆ ಪ್ರತ್ಯುತ್ತರ ನೀಡಿದ ಸಿದ್ದರಾಮಯ್ಯ ಸಿಟಿ ರವಿ ಶೀಘ್ರ ಬಿಜೆಪಿ ಸಂಪುಟ ಸಚಿವರಾಗಲಿ ಎಂದು ಹಾರೈಸುತ್ತೇನೆ. ನನ್ನ ನಾಲಿಗೆಯಲ್ಲಿ ಉಲ್ಟಾ ಮಚ್ಚೆ ಇದೆ ಎಂಬ ನಂಬಿಕೆ ನಿಜವಾಗಲಿ ಎಂದು ಟಾಂಗ್ ಕೊಟ್ಟಿದ್ದಾರೆ.
PublicNext
16/08/2021 05:44 pm