ಕಲಬುರಗಿ: ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಶುರುವಾದ ರಾಜಕೀಯ ನಾಯಕರ ವಾಕ್ಸಮರ ಮುಂದುವರೆದಿದೆ. ದಿವಂಗತರಾದ ನಾಯಕರ ವೈಯಕ್ತಿಕ ವಿಷಯಗಳನ್ನು ಜಗಜ್ಜಾಹೀರು ಮಾಡುವಷ್ಟರ ಮಟ್ಟಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಮಾತಿನ ಜಟಾಪಟಿ ನಡೆದಿದೆ.
ಇನ್ನು ಸಿ.ಟಿ ರವಿ ಹೇಳಿಕೆಗೆ ಕಲಬುರಗಿಯಲ್ಲಿ ಪ್ರತಿಕ್ರಿಯೆ ನೀಡಿರುವ ಶಾಸಕ ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ವಾಜಪೇಯಿವರು ಹೆವಿ ಡ್ರಿಂಕರ್ ಅಂತೆ, ಸಂಜೆಗೆ ಅವರಿಗೆ ಎರಡು ಪೆಗ್ ಡ್ರಿಂಕ್ ಬೇಕಾಗಿತ್ತಂತೆ. ಹಾಗಂತ ಎಲ್ಲಾ ಬಾರ್ ಗಳಿಗೂ ವಾಜಪೇಯಿ ಬಾರ್ ಅಂತಾ ಹಾಕ್ತೀರಾ ಎಂದು ಪ್ರಶ್ನಿಸುವ ಮೂಲಕ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ಸಿಗರೇಟ್ ಸೇದುವುದು ಅಪರಾಧನಾ? 2007ರಲ್ಲಿ ಒಂದು ಮ್ಯಾಗಜಿನ್‍ನಲ್ಲಿ ಸ್ಲೀಪಿಂಗ್ ಆನ್ ದಿ ವಿಲ್ ಎಂಬ ಲೇಖನವೊಂದನ್ನು ಓದಿದ್ದೆ. ಅದರಲ್ಲಿ ವಾಜಪೇಯಿಯವರ ನಾಯಕತ್ವದಲ್ಲಿ ದೇಶ ಯಾಕೆ ಸರಿಯಾದ ರೀತಿಯಲ್ಲಿ ಹೋಗುತ್ತಿಲ್ಲ ಎಂಬುದರ ಬಗ್ಗೆ ಅವರ ವೈಯಕ್ತಿಕ ಜೀವನದ ವಿಚಾರಗಳಿತ್ತು. ವಾಜಪೇಯಿ ಅವರು ಹೆಚ್ಚು ಮದ್ಯಪಾನ ಮಾಡುತ್ತಿದ್ದರಂತೆ, ಅವರಿಗೆ ಸಂಜೆ ಹೊತ್ತು 2 ಗ್ಲಾಸ್ ವಿಸ್ಕಿ ಇರಲೇಬೇಕಾಗುತ್ತಂತೆ, ಸಿಗರೇಟ್ ಹಾಗೂ ಮದ್ಯಪಾನ ಮಾಡುವುದು ತಪ್ಪಲ್ಲ. ಹಾಗಂತ ನೀವು ಎಲ್ಲಾ ಬಾರ ಗಳಿಗೂ ವಾಜಪೇಯಿ ಬಾರ್ ಎಂದು ಹೆಸರಿಡುತ್ತೀರಾ? ಎಂದು ಪ್ರಿಯಾಂಕ್ ಖರ್ಗೆ ಸಿಡಿಮಿಡಿಗೊಂಡಿದ್ದಾರೆ.
PublicNext
14/08/2021 01:37 pm