ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡಿಗೆರೆ ಶಾಸಕ ಅತ್ತೆ ಮೇಲಿನ ಸಿಟ್ಟನ್ನು ಬೆಕ್ಕಿನ ಮೇಲೆ ತೋರುತ್ತಿದ್ದಾರೆ

ಚಿಕ್ಕಮಗಳೂರು: ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ ಕುಮಾರಸ್ವಾಮಿ ಅತ್ತೆ ಸಿಟ್ಟನ್ನು ಬೆಕ್ಕಿನ ಮೇಲೆ ತೋರಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಅಧಿಕಾರ ಬಿಟ್ಟು ಪಕ್ಷದ ಕೆಲಸಕ್ಕೆ ಹೋಗಿದ್ದೇನೆ. ಅಧಿಕಾರದ ಸ್ವಾರ್ಥ ಇದ್ದಿದ್ದರೆ ಮಂತ್ರಿಯಾಗಿಯೇ ಇರುತ್ತಿದ್ದೆ. ಅವರು ಅನುದಾನ ಕೊಟ್ಟಿಲ್ಲ ಎಂದು ಹೇಳುತ್ತಿದ್ದಾರೆ. ಅನುದಾನವನ್ನು ಮುಖ್ಯಮಂತ್ರಿ ಬಳಿ ಕೇಳಲಿ. ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಕೇಳಲಿ. ಆದರೆ ಅವರು ನನ್ನ ಹೆಸರನ್ನು ಏಕೆ ಬಳಸುತ್ತಿದ್ದಾರೆ ನನಗೆ ಅರ್ಥ ಆಗುತ್ತಿಲ್ಲ ಎಂದಿದ್ದಾರೆ.

ಅವರ ಗೆಲುವಿಗೆ ನಮ್ಮ ಶ್ರಮವೂ ಸ್ವಲ್ಪ ಇದೆ. ನನ್ನ ಕುಟುಂಬದ ವೋಟು ಇರುವುದು ಮೂಡಿಗೆರೆ ಕ್ಷೇತ್ರದಲ್ಲಿಯೇ. ನಾವು ಬಿಜೆಪಿ ಬಿಟ್ಟು ಬೇರೆಯವರಿಗೆ ವೋಟು ಹಾಕಿಲ್ಲ. ಅವರು ಅಂಕಿ-ಅಂಶ ತೆಗೆಸಿ ನೋಡಲಿ. ನಾವು ಮಂತ್ರಿಯಾಗಿದ್ದಾಗ ಅತೀ ಹೆಚ್ಚು ಅತಿವೃಷ್ಠಿಯ ಅನುದಾನ ಅವರಿಗೆ ನೀಡಿದ್ದು. ನಾನೇ ಅಂಕಿ-ಅಂಶ ತೆಗೆಸಿ ಕೊಡಿಸುತ್ತೇನೆ ಎಂದಿದ್ದಾರೆ.

Edited By : Nagaraj Tulugeri
PublicNext

PublicNext

14/08/2021 08:57 am

Cinque Terre

35.06 K

Cinque Terre

1

ಸಂಬಂಧಿತ ಸುದ್ದಿ