ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯ ಸಭೆಯಲ್ಲಿ ಮಹಿಳಾ ಸದಸ್ಯರ ಮೇಲೆ ದಾಳಿ: ರಾಹುಲ್ ಪ್ರತಿಭಟನೆ

ನವದೆಹಲಿ : ಸಂಸತ್ತಿನ ಮಳೆಗಾಲದ ಅಧಿವೇಶನ ಹಠಾತ್ ಅಂತ್ಯಗೊಂಡ ಹಾಗೂ ರಾಜ್ಯಸಭೆಯಲ್ಲಿ ಕೆಲ ಮಹಿಳಾ ಸದಸ್ಯರ ಮೇಲೆ ದಾಳಿ ನಡೆದ ಆರೋಪ ಕೇಳಿ ಬಂದಿತ್ತು. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಇನ್ನಿತರ ವಿಪಕ್ಷ ನಾಯಕರು ಸಂಸತ್‌ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ ‘ಇಂದು ನಾವು ನಿಮ್ಮೊಂದಿಗೆ ಮಾತನಾಡಲು ಬಂದಿದ್ದೇವೆ. ಯಾಕೆಂದರೆ ನಮಗೆ ಒಳಗೆ ಮಾತನಾಡಲು ಅವಕಾಶವೇ ಕೊಡುತ್ತಿಲ್ಲ. ಇದು ಪ್ರಜಾಪ್ರಭುತ್ವದ ‘ಕೊಲೆ’ ಎಂದು ಕಿಡಿ ಕಾರಿದ್ದಾರೆ. ಅಲ್ಲದೇ ಸಂಸತ್ತಿನ ಅಧಿವೇಶನ ಮುಗಿದಿದೆ ದೇಶದ ಶೇಕಡಾ 60 ರಷ್ಟು ಮಂದಿ ಯಾವುದೇ ಅಧಿವೇಶನ ನಡೆದಿಲ್ಲ ಎನ್ನುತ್ತಿದ್ದಾರೆ. ನಿನ್ನೆ ರಾಜ್ಯಸಭೆಯಲ್ಲಿ ದೇಶದ ಶೇಕಡಾ 60 ರಷ್ಟು ಜನರ ಪ್ರತಿನಿಧಿಗಳ ಧ್ವನಿ ಹಿಡಿದಿಟ್ಟಿದ್ದಾರೆ, ಅವರನ್ನು ಅವಮಾನಿಸಿದ್ದಾರೆ ಮತ್ತು ದೈಹಿಕವಾಗಿ ಥಳಿಸಿದ್ದಾರೆ ಎಂದಿದ್ದಾರೆ.

Edited By : Nagaraj Tulugeri
PublicNext

PublicNext

12/08/2021 05:50 pm

Cinque Terre

35.85 K

Cinque Terre

5

ಸಂಬಂಧಿತ ಸುದ್ದಿ