ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಠಾಣೆಯಲ್ಲಿ ಪಿಎಸ್ಐ ಜನ್ಮದಿನಾಚರಣೆ : ಡಿಜಿ ಆದೇಶಕ್ಕೂ ಬೆಲೆ ಇಲ್ಲವೆ?

ಶಿಗ್ಗಾವಿ : ಅಪರಾಧಿಗಳೊಂದಿಗೆ ಹೆಚ್ಚುತ್ತಿರುವ ಸ್ನೇಹ ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ್ ಇತ್ತೇಚೆಗೆ ಆದೇಶವೊಂದನ್ನು ಹೊರಡಿಸಿ, ಇನ್ನು ಮುಂದೆ ಯಾವುದೇ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ಜನ್ಮದಿನ ಆಚರಿಸಿಕೊಳ್ಳಬಾರದೆಂದು ಆದೇಶ ಹೊರಡಿಸಿದ್ದಾರೆ.

ಆದರೆ ತಾಲೂಕಿನ ಬಂಕಾಪುರ ಪೊಲೀಸ್‌ ಠಾಣೆಯಲ್ಲಿ ಪಿಎಸ್ಐ ಸಂತೋಷ ಪಾಟೀಲ ಅವರಿಗೆ ಈ ಆದೇಶ ಅನ್ವಯವಾದಂತೆ ಕಾಣುವುದಿಲ್ಲ. ಡಿಜಿ ಅವರ ಆದೇಶ ಗಾಳಿಗೆ ತೂರಿ ಅವರು ಸ್ಥಳೀಯ ಮುಖಂಡರ ಜತೆ ಈಚೆಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ.

ಸಮವಸ್ತ್ರದಲ್ಲಿರುವ ಪೊಲೀಸ್‌ ಅಧಿಕಾರಿಗಳ ವರ್ತನೆಯು ಇಡೀ ಪೊಲೀಸ್‌ ಸಮುದಾಯವನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಪೊಲೀಸ್‌ ಅಧಿಕಾರಿಗಳು ಅರಿತಿರಬೇಕು. ಅಪರಾಧ ಹಿನ್ನೆಲೆ, ಸಮಾಜ ಘಾತುಕ ವ್ಯಕ್ತಿಗಳೊಂದಿಗೆ ಸ್ವಾಗತ, ಬೀಳ್ಕೊಡುಗೆ ಮುಂತಾದ ಕಾರ್ಯಕ್ರಮ ಆಚರಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಆಚರಣೆಗಳಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಪೊಲೀಸರ ಮೇಲೆ ಅಪನಂಬಿಕೆ ಬರುತ್ತದೆ' ಎಂದು ಸೂದ್ ಎಚ್ಚರಿಕೆ ನೀಡಿದ್ದರು.

ಬಂಕಾಪುರ ಠಾಣೆಯಲ್ಲಿ ಯುವಕರ ಗುಂಪು ಪಿಎಸ್ಐ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿರುವ, ಹಾರ ಹಾಕಿರುವ, ಸಿಹಿ ತಿನಿಸುತ್ತಿರುವ ಚಿತ್ರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

ಆದರೆ ತಾವು ಠಾಣೆಯಲ್ಲಿ ಯಾವುದೇ ಜನ್ಮ ದಿನಾಚರಣೆ ಆಚರಿಸಿಕೊಂಡಿಲ್ಲ. ಕೆಲವು ಪ್ರಕರಣಗಳ ವಿಚಾರಣೆ ಅಂಗವಾಗಿ ಬಂದಿರುವ ಜನರು ಶುಭ ಕೋರಿದ್ದಾರೆಯೇ ವಿನಾ ಹುಟ್ಟುಹಬ್ಬ ಆಚರಿಸಿಲ್ಲ' ಬದಲಾಗಿ ತಾಲೂಕಿನ ಬಿಸನಳ್ಳಿ ಕಾಶಿಪೀಠದ ಸಂಗೀತ, ವೇದ ಕಲಿಕೆ ಮಕ್ಕಳಿಗೆ (ವಟುಗಳಿಗೆ) ಸಿಹಿ ಹಂಚಿ ಆಚರಿಸಲಾಗಿದೆ ಪಿಎಸ್ಐ ಸಂತೋಷ ಪಾಟೀಲ ಪೊಲೀಸ್ ಹೇಳಿಕೊಂಡಿದ್ದಾರೆ.

ಠಾಣೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ ಎಸ್ಪಿ ಹನುಮಂತರಾಯ.

Edited By :
PublicNext

PublicNext

12/08/2021 05:23 pm

Cinque Terre

64.81 K

Cinque Terre

4

ಸಂಬಂಧಿತ ಸುದ್ದಿ