ನವದೆಹಲಿ: ಸಚಿವ ಕೆ.ಎಸ್.ಈಶ್ವರಪ್ಪ ಹರಕುಬಾಯಿ ದಾಸ. ಇದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಕೆ.ಎಸ್.ಈಶ್ವರಪ್ಪ ಅವರು ಮೊನ್ನೆ ಹೇಳಿಕೆ ನೀಡಿದ ದಿನ ಅಮಾವಾಸ್ಯ ಆಗಿದ್ದರಿಂದ ಆ ರೀತಿ ಮಾತನಾಡಿರಬಹುದು. ಮೇಲಿಂದ ಮೇಲೆ ಈಶ್ವರಪ್ಪ ಅವರು ಈ ರೀತಿಯ ಹೇಳಿಕೆ ಕೊಡುತ್ತಿರುವುದನ್ನು ಅವಲೋಕಿಸಿದರೆ, ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದು ಅನಿಸುತ್ತಿದೆ. ಅವರದ್ದು ಇದು ಹೊಸದಲ್ಲ. ಬಿ.ಎಸ್. ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಅವರ ಬಗ್ಗೆ ಏನು ಮಾತಾಡಿದರು ಅನ್ನೋದು ಗೊತ್ತಿದೆ" ಎಂದು ವಾಗ್ದಾಳಿ ನಡೆಸಿದರು.
'ನಾಗಪುರದ ಆರ್‌ಎಸ್‌ಎಸ್ ವಿಶ್ವವಿದ್ಯಾಲಯದ ಈಶ್ವರಪ್ಪ ನನ್ನ ಬಗ್ಗೆ ಮಾತನಾಡುತ್ತಿರುವುದೂ ಹೊಸದಲ್ಲ. ಕೂಡಲೇ ಅವರಿಗೆ ಏಷ್ಯದ ಅತಿ ದೊಡ್ಡ ಮನೋ ಚಿಕಿತ್ಸಾಲಯವಾದ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಕೊಡಿಸಿದರೆ ಒಳ್ಳೆಯದು. ನಾಗಪುರ ವಿವಿ ದ್ವೇಷ, ಅಸೂಯೆ ತುಂಬಿ ರಸ್ತೆಗೆ ಬಿಡುತ್ತೆ. ನಾವು ಸಂವಿಧಾನಬದ್ಧ ವಿವಿಯ ಸದಸ್ಯರು. ಶೌಚಾಲಯ ನಿರ್ಮಿಸಿದ್ದು ತಮ್ಮ ಸಾಧನೆ ಎಂದು ಹೇಳ್ತಾರೆ. ಶೌಚಾಲಯದ ಸಾಧನೆಗೆ ಪ್ರಧಾನಿ ಮೋದಿ ಹೆಸರಿಡಿ ಅಂದೆ ಅದಕ್ಕೆ ಸಚಿವ ಈಶ್ವರಪ್ಪಗೆ ಅಷ್ಟೊಂದು ಕಸಿವಿಸಿ ಯಾಕೆ ಎಂದು ಪ್ರಶ್ನಿಸಿದ್ದಾರೆ.
PublicNext
11/08/2021 01:02 pm