ಬೆಳಗಾವಿ: ನನಗೂ ಎಲ್ಲ ದಂಡಯಾತ್ರೆ ಮಾಡಲು ಬರುತ್ತೆ, ಅದು ನನ್ನ ದೌರ್ಬಲ್ಯ ಅಲ್ಲ. ಆದರೆ ಆ ದಂಡಯಾತ್ರೆ ಮಾಡಲು ನನಗೆ ಇಚ್ಛೆ ಇಲ್ಲ. ಸುಮ್ಮನಿರುವುದೇ ದೌರ್ಬಲ್ಯವಲ್ಲ ಎಂದು ಶಾಸಕ ಅಭಯ್ ಪಾಟೀಲ್ ಪರೋಕ್ಷವಾಗಿ 'ಕಮಲ ಪಡೆ'ಗೆ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, "ನನ್ನ ಕ್ಷೇತ್ರದಲ್ಲಿ ಇರುವಷ್ಟು ಕಾರ್ಯಕರ್ತರು ಬೇರೆ ಯಾರ ಕ್ಷೇತ್ರದಲ್ಲೂ ಇಲ್ಲ. ಆದರೆ ಯಾವೊಬ್ಬ ಕಾರ್ಯಕರ್ತರು ರಸ್ತೆಗಿಳಿದು ಹೇಳಿಕೆ ಕೊಟ್ಟಿಲ್ಲ. ಪಕ್ಷದ ಶಿಸ್ತಿದೆ. ಪಕ್ಷ ನಮಗೆ ಬಹಳಷ್ಟು ಕೊಟ್ಟಿದೆ. ಪಕ್ಷದ ತೀರ್ಮಾನದ ಬಗ್ಗೆ ಮಾತನಾಡಲ್ಲ ಎಂದರು.
ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿಯೇ ಬೇರೆ, ಬೆಳಗಾವಿ, ಖಾನಾಪುರ ತಾಲೂಕಿನ ರಾಜಕೀಯ ಪರಿಸ್ಥಿತಿ ಬೇರೆ. ಪಕ್ಷ ನಿಷ್ಠೆ, ಹಿಂದುತ್ವ, ಸೀನಿಯಾರಿಟಿ ಒಮ್ಮೊಮ್ಮೆ ಅನಿವಾರ್ಯ ಕಾರಣದಿಂದ ಸಚಿವ ಸ್ಥಾನಕ್ಕೆ ಕೌಂಟ್ ಆಗೋದಿಲ್ಲ. ಆದರೆ ರಾಜ್ಯದ ನಾಯಕರು ಯೋಗ್ಯರು, ಸಮರ್ಥರು, ಭ್ರಷ್ಟಾಚಾರ ರಹಿತ, ಕಳಂಕರಹಿತರ ನೇಮಿಸಬೇಕೆಂದು ನಿರ್ಧಾರ ಕೈಗೊಂಡಿದ್ದಾರೋ ಅದನ್ನು ಸ್ವಾಗತಿಸುವೆ ಎಂದು ಪರೋಕ್ಷವಾಗಿ ರಾಜ್ಯ ಬಿಜೆಪಿ ನಾಯಕರಿಗೆ ಅಭಯ್ ಪಾಟೀಲ್ ಟಾಂಗ್ ಕೊಟ್ಟರು.
PublicNext
11/08/2021 08:03 am