ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಷ್ಟ್ರ ರಾಜಧಾನಿಯಲ್ಲಿ ದಿ.ಸುರೇಶ ಅಂಗಡಿ ಪುತ್ಥಳಿ ಅನಾವರಣ

ನವದೆಹಲಿ : ಕೋವಿಡ್–19ನಿಂದ ಸಂಸದ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದಾಲೇ ನಿಧನರಾದ ದಿ.ಸುರೇಶ ಅಂಗಡಿ ಅವರ ಪುತ್ಥಳಿಯನ್ನು ನವದೆಹಲಿಯ ದ್ವಾರಕಾ ನಗರದ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿರುವ ಸಮಾಧಿ ಸ್ಥಳದಲ್ಲಿ ಮಂಗಳವಾರ ಅನಾವರಣಗೊಳಿಸಲಾಯಿತು.

ಸಮಾಧಿಗೆ ಪೂಜೆ ಸಲ್ಲಿಸಿ, ಅಂಗಡಿ ಅವರ ಜೀವನ ಮತ್ತು ಸಾಧನೆಯನ್ನು ಸ್ಮರಿಸಿ ನಮನ ಸಲ್ಲಿಸಲಾಯಿತು. ಅಂಗಡಿ ಕುಟುಂಬದವರು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ, ಭಗವಂತ ಖೂಬಾ, ಸಂಸದರಾದ ಡಿ.ವಿ. ಸದಾನಂದ ಗೌಡ, ಪ್ರತಾಪ ಸಿಂಹ, ಬಿ.ವೈ. ರಾಘವೇಂದ್ರ, ಪಿ.ಸಿ. ಗದ್ದಿಗೌಡರ, ಎಸ್. ಮುನಿಸ್ವಾಮಿ, ಈರಣ್ಣ ಕಡಾಡಿ, ಅಣ್ಣಾಸಾಹೇಬ ಜೊಲ್ಲೆ, ಉಮೇಶ ಜಾಧವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಪಾಲ್ಗೊಂಡಿದ್ದರು.

Edited By : Nirmala Aralikatti
PublicNext

PublicNext

10/08/2021 06:44 pm

Cinque Terre

42.16 K

Cinque Terre

0

ಸಂಬಂಧಿತ ಸುದ್ದಿ