ಮಂಡ್ಯ: ಶಾಸಕ ಪ್ರೀತಂಗೌಡ ಇನ್ನೂ ಹುಡುಗ. ಹಾಸನ ಜಿಲ್ಲೆಯಲ್ಲಿ ಇನ್ನೂ ಬೆಳೆಯಬೇಕಾದವನು. ಹೀಗಾಗಿ ಅವನು ಇತಿಮಿತಿಯಲ್ಲಿ ಇರಬೇಕು. ಒಂದು ಸಾರಿ ಶಾಸಕನಾದ ತಕ್ಷಣಕ್ಕೆ ದೇವರಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಚಾಟಿ ಬೀಸಿದ್ದಾರೆ.
ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, "ನಾನು ಸಚಿವ ಆಗಿದ್ದಾಗ ಪ್ರೀತಮ್ ಗೌಡ ಹುಟ್ಟೇ ಇರಲಿಲ್ಲ. ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಕುಟುಂಬಕ್ಕೆ 50 ವರ್ಷ ರಾಜಕೀಯ ಇತಿಹಾಸವಿದೆ. ರಾಷ್ಟ್ರದ ಪ್ರಧಾನಿಗಳಾಗಿದ್ದವರು. ಅವರ ಮನೆಗೆ ಹೋಗುವುದರಲ್ಲಿ ತಪ್ಪೇನಿದೆ.? ನಾನು ಕೂಡ ದೇವೇಗೌಡರ ಮನೆ ಹೋಗಿದ್ದೆ. ಪ್ರೀತಮ್ ಗೌಡ ಅವರು ಇಂತಹ ಮಾತುಗಳನ್ನು ಬಿಡಬೇಕು" ಎಂದು ಸಲಹೆ ನೀಡಿದರು.
PublicNext
10/08/2021 09:58 am