ಬೆಳಗಾವಿ: ಇಂದಿರಾ ಕ್ಯಾಂಟೀನ್ ಹೆಸರು ಚೇಂಜ್ ಮಾಡಲ್ಲ ಎಂಬ ವಿಶ್ವಾಸ ಇದೆ. ಹಿಂದೆ ಯಡಿಯೂರಪ್ಪ ಇದ್ದಾಗಲೂ ಹೇಳಿದ್ರು, ಆದ್ರೆ ಹೆಸರು ಬದಲಾಯಿಸಿರಲಿಲ್ಲ. ಹೆಸರು ಚೇಂಜ್ ಮಾಡೋದರಿಂದ ಏನು ದೊಡ್ಡ ಬದಲಾವಣೆ ಆಗಲ್ಲ. ಇಂದಿರಾ ಗಾಂಧಿ ಹೆಸರಲ್ಲೇ ಇಂದಿರಾ ಕ್ಯಂಟಿನ್ ಮುಂದುವರೆಯಬೇಕೆಂಬ ಆಸೆ ಇದೆ. ಹೆಸರು ಬದಲಾವಣೆ ಮಾಡೋದರಿಂದ ಸಾಧನೆ ಏನೂ ಮುಚ್ಚಿಡಲಾಗಲ್ಲ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು. .
ಸೋಮವಾರ ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ನಮ್ಮ ಯೋಜನೆ ಇರೋದ್ರಿಂದ ಅನುದಾನ ಸಹ ಕೊಡ್ತಿಲ್ಲ. ಏಳು ವರ್ಷದಲ್ಲಿ ಯಾವುದೇ ಹೇಳುವಂತಹ ಯೋಜನೆ ಮೋದಿ ಮಾಡಿಲ್ಲ. ನಮ್ಮ ಯೋಜನೆಗಳ ನೇಮ್ ಚೇಂಜ್ ನಮ್ಮ ಪ್ಲೇಟ್ ಚೇಂಜ್ ಮಾಡಿ ಅದು ನನ್ನ ಸಾಧನೆ ಅಂತಾ ಮೋದಿ ಹೇಳ್ತಿದಾರೆ. ಮೋದಿಯವರು ತಾವು ಮಾಡಿದ ಸಾಧನೆ ದೇಶಕ್ಕೆ ತೋರಿಸುವ ಯೋಜನೆ ಯಾವುದೂ ಇಲ್ಲ. ಬಿಜೆಪಿಯವರು ದ್ವೇಷದ ರಾಜಕಾರಣ ಮಾಡ್ತಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.
ಖಾತೆ ಹಂಚಿಕೆ ಕುರಿತು ನೂತನ ಸಚಿವರಿಂದ ಕ್ಯಾತೆ ವಿಚಾರವಾಗಿ ಮಾತನಾಡಿದ ಅವರು, ಅದನ್ನ ಸರಿ ಮಾಡುವ ಜವಾಬ್ದಾರಿ ಸರ್ಕಾರದ್ದು, ನಾವು ಏನು ಮಾಡಕ್ಕಾಗಲ್ಲ ಅದನ್ನ ಹೇಳುವ ಶಕ್ತಿ, ಅಧಿಕಾರ ನಮಗಿಲ್ಲ. ಸಚಿವ ಸ್ಥಾನ ಕೊಟ್ಟರೂ ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಇದೆ. ಇದು ಖಂಡಿತವಾಗಿ ಸರ್ಕಾರದ ಮೇಲೆ ಪರಿಣಾಮ ಬೀರೇ ಬಿರುತ್ತದೆ ಎಂದು ಅವರು ತಿಳಿಸಿದರು.
ಪ್ರವಾಹ ಪೀಡಿತ ಜಿಲ್ಲೆಗಳಿಗೆ ಅನುದಾನ ಬಿಡುಗಡೆ ಮಾಡದ ವಿಚಾರವಾಗಿ ಮಾತನಾಡಿದ ಅವರು, ಪ್ರವಾಹ ಸೆಟಲ್ ಆಯ್ತು ಆದರೆ ಸರ್ಕಾರ ಇನ್ನೂ ಸೆಟಲ್ ಆಗಿಲ್ಲ, ಅವರು ಮೊದಲು ಸೆಟಲ್ ಆಗಬೇಕು. ವಿರೋಧ ಪಕ್ಷವಾಗಿ ನೆರೆ ಪರಿಹಾರಕ್ಕೆ ಆಗ್ರಹಿಸಿ ಹೋರಾಟ ಮಾಡುತ್ತೇವೆ. 2019ರಲ್ಲೂ ಹೋರಾಟ ಮಾಡಿದ್ದೇವೆ ಈಗಲೂ ಹೋರಾಟ ಮಾಡ್ತೇವೆ. ವಿಧಾನಸೌಧ ಒಳಗೆ, ಹೊರಗೆ ಎರಡೂ ಕಡೆ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
PublicNext
09/08/2021 05:58 pm