ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿ.ಟಿ ರವಿ ಅವರೇ ಮೊದಲು ನಿಮ್ಮ ಮನೋಸ್ಥಿತಿ ಬದಲಿಸಿಕೊಳ್ಳಿ: ದಿನೇಶ ಗುಂಡೂರಾವ್

ಬೆಂಗಳೂರು :ದೇಶದ ರಾಯಭಾರಿಯಂತಿರುವ ಬಿಜೆಪಿಯ ಸಿ.ಟಿ.ರವಿ ಅವರು ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಲು ಒತ್ತಾಯಿಸುತ್ತಿದ್ದಾರೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹೆಸರು ಬದಲಾದ ಮಾತ್ರಕ್ಕೆ ಬಡವರ ಹಸಿವು ನೀಗುವುದಾದರೆ ನಮ್ಮ ಅಭ್ಯಂತರವಿಲ್ಲ. ಆದರೆ ಇದೇ ಇಂದಿರಾ ಕ್ಯಾಂಟೀನ್ಗೆ ಸರ್ಕಾರ ಅನುದಾನ ತಡೆ ಹಿಡಿದಿದೆ. ಸಿ.ಟಿ.ರವಿ ಅವರೇ.. ಬದಲಾಗಬೇಕಾಗಿರುವುದು ಹೆಸರಲ್ಲ. ನಿಮ್ಮ ಮನಸ್ಥಿತಿ ಎಂದು ಹೇಳಿದ್ದಾರೆ. ಕೇವಲ ಹೆಸರುಗಳನ್ನು ಬದಲಾಯಿಸುವ ದೇಶದ ಮನಃಸ್ಥಿತಿಯನ್ನು ಕೈ ಬಿಡಿ. ಬಡವರ ಹಸಿವನ್ನು ನೀಗಿಸಲು ಮುಂದಾಗಿ. ಪ್ರಸ್ತುತ ಪರಿಸ್ಥಿತಿಯಲ್ಲಿ ಬಡವರ ಹಸಿವು ನೀಗಿಸುವುದು ಮುಖ್ಯವಾಗಿದೆ ಎಂದು ಅವರು ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

09/08/2021 07:50 am

Cinque Terre

26.7 K

Cinque Terre

3

ಸಂಬಂಧಿತ ಸುದ್ದಿ