ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದರಾಮಯ್ಯ ದೇಶದಲ್ಲೇ ಕೆಟ್ಟ ಕನಸುಗಾರ: ಈಶ್ವರಪ್ಪ ವಾಗ್ದಾಳಿ

ಚಿತ್ರದುರ್ಗ: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದೇಶದಲ್ಲೇ ಕೆಟ್ಟ ಕನಸುಗಾರ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲೆಯ ಮಾದಾರಚನ್ನಯ್ಯ ಗುರುಪೀಠದಲ್ಲಿ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದ ಬಳಿಕ ಮಾತನಾಡಿದ ಸಚಿವರು, ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ಕಳೆದುಕೊಂಡಾಗಿಂದ ಕೆಟ್ಟ ಕನಸು ಬೀಳುತ್ತಿದೆ. ಯಾವಾಗಲೂ ಬಿಜೆಪಿ ಸರ್ಕಾರ ಉರುಳುವ ಕನಸು. ಮತ್ತೆ ಸಿಎಂ ಆಗಬೇಕು ಎಂದು ಕನುಸ ಕಾಣುತ್ತಿರುವ ಸಿದ್ದರಾಮಯ್ಯ ದೇಶದಲ್ಲೇ ಅತ್ಯಂತ ಕೆಟ್ಟ ಕನಸುಗಾರ. ದಲಿತ ಮತ್ತು ಹಿಂದುಳಿದ ವರ್ಗದವರಿಗೆ ಮಾಡಿದ ಮೋಸದಿಂದಲೇ ಸಿದ್ದರಾಮಯ್ಯ ಸರ್ಕಾರ ಹೋಯ್ತು ಎಂದು ಕಿಡಿಕಾರಿದರು.

Edited By : Vijay Kumar
PublicNext

PublicNext

08/08/2021 08:51 pm

Cinque Terre

74.46 K

Cinque Terre

5

ಸಂಬಂಧಿತ ಸುದ್ದಿ