ಬೆಂಗಳೂರು: "ಓ ಬಿ.ಎಸ್. ಯಡಿಯೂರಪ್ಪ ಸಂಪುಟ ದರ್ಜೆ ಸ್ಥಾನಮಾನ ತಿರಸ್ಕರಿಸಿದ್ರಾ.? ಒಳ್ಳೆಯದಾಯ್ತು. ಯಡಿಯೂರಪ್ಪ ಒಳ್ಳೆಯ ಕೆಲಸ ಮಾಡಿದ್ದಾರೆ ನಾನೇ ಅವರಿಗೆ ಹೇಳ್ಬೇಕು ಅಂತ ಇದ್ದೆ ಎಂದು ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಯಾವುದೂ ಸರಿ ಇಲ್ಲ. ಮುಖ್ಯಮಂತ್ರಿ ಆಯ್ಕೆ ಬಗ್ಗೆಯೇ ಅಸಮಾಧಾನವಿದೆ. ನೀಡಿರುವ ಖಾತೆಗಳ ಬಗ್ಗೆಯೂ ಅತೃಪ್ತಿ ಇದೆ ಎಂದಿದ್ದಾರೆ. ಇನ್ನು ಖಾತೆ ಹಂಚಿಕೆ ವಿಷಯ ಅವರು ಆಂತರಿಕ ವಿಚಾರ. ಆದರೆ ಇಷ್ಟು ಮಾತ್ರ ನಿಜ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ.. ಯಾವಾಗ ಏನು ಆಗುತ್ತದೆ ಎಂದು ಹೇಳಲು ಆಗುವುದಿಲ್ಲ. ಯಾವತ್ತಾದರೂ ಒಂದು ದಿನ ಸ್ಫೋಟವಾಗಬಹುದು ಎಂದರು.
PublicNext
08/08/2021 03:30 pm