ನವದೆಹಲಿ: ಉತ್ತರ ಪ್ರದೇಶದ ಚುನಾವಣೆ ಹೊಸ್ತಿಲಲ್ಲಿ ರೋಚಕ ಸಂಗತಿಗಳು ನಡೆಯುತ್ತಿವೆ. ಈಗ ಉತ್ತರ ಪ್ರದೇಶದಲ್ಲೇ ಇರುವ ಹೈದರಾಬಾದ ಸಂಸದ ಅಸಾದುದ್ದೀನ್ ಓವೈಸಿ ನಾನೇನು ಕಿಂಗ್ ಮೇಕರ್ ಮತ್ತು ಗೇಮ್ ಬ್ರೇಕರ್ ಅಲ್ಲವೇ ಅಲ್ಲ. ನಾನು ಬಂದಿರೋದು ಇಲ್ಲಿ ಮುಸ್ಲಿಂ ನಾಯಕತ್ವದ ಸ್ಥಾಪನೆಗಾಗಿ ಅಷ್ಟೇ ಎಂದಿದ್ದಾರೆ.
ಉತ್ತರ ಪ್ರದೇಶ ಚುನಾವಣೆ ಬಗ್ಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯದ ಬಗ್ಗೆ ಮಾತಾಡಿದ್ದಾರೆ. ನೀವು ಬಿಹಾರದ ಚುನಾವಣೆಯಲ್ಲಿ ಗೇಮ್ ಬ್ರೇಕರ್ ಅನ್ನೋದನ್ನ ವಿಪಕ್ಷಗಳಿಗೆ ಸಾಬೀತು ಮಾಡಿದ್ದೀರಿ. ಅದೇ ರೀತಿ ಆರ್‍ಜೆಡಿ ಆಟವನ್ನು ಬ್ರೇಕ್ ಮಾಡಿದ್ದು ನೀವೇ ಅಲ್ವಾ? ಕೆಲವು ರಾಜಕೀಯ ತಂತ್ರ ರೂಪಿಸಿ ಬಿಹಾರ ಚುನಾವಣೆಯಲ್ಲಿ ಗೇಮ್ ಆಡಿದಂತೆ ಉತ್ತರ ಪ್ರದೇಶದಲ್ಲಿಯೂ ಅದೇ ತಂತ್ರ ಪ್ರಯೋಗಿಸಿ ಕಿಂಗ್ ಮೇಕರ್ ಅಥವಾ ಗೇಮ್ ಬ್ರೇಕರ್ ಆಗ್ತೀರಾ ಎಂದು ಕೇಳಿದ್ದರು.
ಇದಕ್ಕೆ ಉತ್ತರಿಸಿರುವ ಓವೈಸಿ, ನೀವು ಹೇಗೆ ಬೇಕಾದರೂ ವಿಶ್ಲೇಷಣೆ ಮಾಡಿ. ಆದ್ರೆ ನಾನು ಉತ್ತರ ಪ್ರದೇಶಕ್ಕೆ ಬಂದಿರುವ ಉದ್ದೇಶವೇ ಬೇರೆ ಇದೆ. ನಮ್ಮ ದೇಶದಲ್ಲಿ ಹಿಂದೂ ಸಹೋದರರ ಶತೃಗಳು ಮುಸ್ಲಿಮರು ಎಂಬ ಭ್ರಮೆ ಮೂಡಿಸಲಾಗಿದೆ. ನಾವು 65 ವರ್ಷ ಸೆಕ್ಯುಲರ್ ಹೆಸರಿನ ಪಕ್ಷದಲ್ಲಿ ಮೋಸ ಹೋಗಿದ್ದೇವೆ. ರಾಜಕೀಯದಲ್ಲಿ ಯಾರು ಏನಾದರೂ ಕೆಲಸ ಮಾಡಲಿ. ನಾನು ನನ್ನ ಕೆಲಸ ಮಾಡುತ್ತೇನಷ್ಟೇ ಎಂದು ಓವೈಸಿ ಹೇಳಿದ್ದಾರೆ.
PublicNext
08/08/2021 01:06 pm