ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ನಿವಾಸ, ಕಚೇರಿ, ಫ್ಲ್ಯಾಟ್ ಮೇಲೆ ಭಾರೀ ದೊಡ್ಡ ಇ.ಡಿ ಅಧಿಕಾರಿಗಳ ತಂಡ ರೇಡ್ ಮಾಡಿತ್ತು. ಜತೆಗೆ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ ರೇಡ್ ಮಾಡಿ ಸಾಕಷ್ಟು ವಿಚಾರಣೆ ನಡೆಸಿದರು. ಈಗ ವಿಚಾರಣೆ ಅಂತ್ಯಗೊಂಡಿರುವ ಬೆನ್ನಲ್ಲೇ ಜಮೀರ್ ಖಾನ್ ಮಾಧ್ಯಮದವರೊಂದಿಗೆ ಮಾತಾಡಿದ್ದಾರೆ.
"ಎಲ್ಲಾ ದಾಖಲೆಗಳನ್ನು ನೀಡಿದ ಬಳಿಕ ಅವರು ಸಮಾಧಾನ ಆಗಿ ನಾವು ಕರೆದಾಗ ಬರಬೇಕು ಅಂತ ಹೇಳಿ ಹೋಗಿದ್ದಾರೆ. ನೋಟಿಸ್ ಏನೂ ಕೊಟ್ಟಿಲ್ಲ. ಸಹೋದರರನ್ನು ತನಿಖೆ ಮಾಡಿಲ್ಲ. ನನ್ನ ಮನೆ ಹುಡುಕಾಡಿದರು ಅಷ್ಟೇ. ಒಟ್ಟಿನಲ್ಲಿ ಅವರು ಏನು ನಿರೀಕ್ಷೆ ಇಟ್ಕೊಂಡು ಬಂದಿದ್ದಾರೋ ಆ ನಿರೀಕ್ಷೆಗೆ ತಕ್ಕಂತೆ ಮನೆಯಲ್ಲಿ ಏನೂ ಸಿಕ್ಕಿಲ್ಲ. ನಾನು ಲೂಟಿ ಮಾಡಿಲ್ಲ. ಅಭಿಮಾನಿಗಳೇ ನನ್ನ ಆಸ್ತಿ. ಕೇಳಿದ ಎಲ್ಲ ದಾಖಲೆ ಕೊಟ್ಟಿದ್ದೀನಿ" ಎಂದು ಜಮೀರ್ ಹೇಳಿದ್ದಾರೆ.
3-4 ದೂರು ಬಂದಿತ್ತಂತೆ. ನನ್ನ ವ್ಯವಹಾರ ಎಲ್ಲ ವೈಟ್ ಅಮೌಂಟ್ ಎಂದಿದ್ದಾರೆ. ಎಲ್ಲರದ್ದೂ ನನ್ನ ಮೇಲೆಯೇ ಕಣ್ಣು. ರಾಜಕೀಯದಲ್ಲಿ ಶತ್ರುಗಳು ಸಹಜ. ಐಎಂಎ ಬಗ್ಗೆ ಚರ್ಚೆಯೇ ಆಗಿಲ್ಲ. ಮನೆ ಕಟ್ಟಲು 7 ವರ್ಷ ಆಗಿದೆ. ಮನೆ ಸಂಬಂಧಿಸಿದ ದಾಖಲೆಗಳನ್ನು ಕೇಳಿದರು ಕೊಟ್ಟಿದ್ದೀನಿ. ನನ್ನ ಮನೆ ಐಷಾರಾಮಿ ಆಗಿದೆ ಎಂದು ತಿಳಿಸಿದ್ದಾರೆ.
PublicNext
06/08/2021 08:06 am