ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೈ ಕುಯ್ದುಕೊಂಡ ವಿಜಯೇಂದ್ರ ಅಭಿಮಾನಿ: ಮಂತ್ರಿ ಸ್ಥಾನ ಸಿಗದಿರುವುದೇ ಕಾರಣ

ಬೆಂಗಳೂರು: ನಮ್ಮ ವಿಜಯೇಂದ್ರ ಸಾಹೇಬರಿಗೆ ಮಂತ್ರಿ ಸ್ಥಾನ ಕೊಟ್ಟಿಲ್ಲ ಎಂದು ಬೇಸರಗೊಂಡ ಅಭಿಮಾನಿಯೊಬ್ಬ ಕಾವೇರಿ ನಿವಾಸದ ಬಳಿ ಕೈ ಕುಯ್ದುಕೊಂಡು ಪ್ರತಿಭಟನೆ ನಡೆಸಿದ್ದಾರೆ. ಮಂಡ್ಯ ಜಿಲ್ಲೆಯ ಶಿವಕುಮಾರ್ ಆರಾಧ್ಯ ಎಂಬ ವ್ಯಕ್ತಿ ಕೈ ಕೊಯ್ದುಕೊಂಡ ಅಭಿಮಾನಿ. ನಮ್ಮ ಸಾಹೇಬರು ಬಿ.ಎಸ್ ಯಡಿಯೂರಪ್ಪ ರ ಮಗನನ್ನು ಸಂಪುಟಕ್ಕೆ ಸೇರಿಸಿಲ್ಲ. ನನಗೆ ತುಂಬಾ ನೋವಾಗುತ್ತಿದೆ. ನಾನು ಪ್ರಾಣ ಕಳೆದುಕೊಳ್ಳಬೇಕು ಎನ್ನಿಸುತ್ತಿದೆ. ಆದರೆ ನನಗೂ ಕುಟುಂಬ ಇದೆ. ಹಾಗಾಗಿ ಸಾಯುವುದಿಲ್ಲ ಎಂದಿದ್ದಾರೆ.

ವಿಜಯೇಂದ್ರ ಇಲ್ಲದೇ ಇದ್ದರೆ ಅದು ಸಂಪುಟವೇ ಅಲ್ಲ. ಹೈ ಕಮಾಂಡ್ ನನ್ನ ಈ ರಕ್ತ ತೆಗೆದುಕೊಳ್ಳಿ. ಹೈಕಮಾಂಡ್ ನಂಬಿಕೊಂಡರೆ ರಾಜ್ಯದಲ್ಲಿ ಪಕ್ಷ ಕಟ್ಟೊಕೇ ಹಾಗಲ್ಲ. ಬಳಿಕ ಶಿವಕುಮಾರ್ ಆರಾಧ್ಯನನ್ನ ಸ್ಥಳದಲ್ಲಿದ್ದ ಪೊಲೀಸರು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದ್ಯೊಯ್ದಿದ್ದಾರೆ.

Edited By : Nagaraj Tulugeri
PublicNext

PublicNext

05/08/2021 08:03 am

Cinque Terre

82.06 K

Cinque Terre

17

ಸಂಬಂಧಿತ ಸುದ್ದಿ