ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಸಕ ಓಲೇಕಾರ್ ಗೆ ಸಚಿವಸ್ಥಾನ ಕೊಡಿ : ಟ್ಯಾಂಕ್ ಏರಿದ ಅಭಿಮಾನಿಗಳಿಂದ ಹೈಡ್ರಾಮಾ!

ಹಾವೇರಿ: ನಮ್ಮ ಶಾಸಕರಿಗೆ ಸಚಿವ ಸ್ಥಾನ ಕೊಡಲೇ ಬೇಕು ಇಲ್ಲವಾದ್ರೆ ನಾವು ಸಾಯುತ್ತೇವೆ ಎಂದು ಶಾಸಕ ಓಲೇಕಾರ ಅವರ ಇಬ್ಬರು ಅಭಿಮಾನಿಗಳು ಟ್ಯಾಂಕ್ ಏರಿ ಹೈ ಡ್ರಾಮಾ ಸೃಷ್ಠಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ.

ಇದರಿಂದ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಹಾವೇರಿ ನಗರದ ಮುನ್ಸಿಪಲ್ ಮೈದಾನದಲ್ಲಿ ಈ ಘಟನೆ ನಡೆದಿದ್ದು, ಚಂದ್ರಶೇಖರ ಹಳ್ಳಿಕೇರಿ ಹಾಗೂ ಭೀಮನಗೌಡ ಪಾಟೀಲ್ ಎಂಬ ಹತ್ತಿಮತ್ತೂರು ಗ್ರಾಮದವರು ಈ ರೀತಿ ಹುಚ್ಚಾಟ ಮೆರೆದಿದ್ದಾರೆ.

ಪಕ್ಷದ ಬಾವುಟ ಮೈಗೆ ಸುತ್ತಿಕೊಂಡು ಟ್ಯಾಂಕ್ ಹತ್ತಿ, ನೆಹರು ಓಲೇಕಾರ ಪರ ಘೋಷಣೆ ಕೂಗುತ್ತ ಟ್ಯಾಂಕ್ ಏರಿದರು. ನಂತರ ಸಚಿವಸ್ಥಾನ ಸಿಗುವವರೆಗೂ ಕೆಳಗೆ ಇಳಿಯುವುದಿಲ್ಲ ಎಂದು ಪಟ್ಟು ಹಿಡಿದರು.

ನಂತರ ಸ್ಥಳಕ್ಕೆ ಬಂದ ಪಿ.ಎಸ್ ಐ ಹೊಸಮನಿ ಪ್ರತಿಭಟನಾ ನಿರತ ಯುವಕರ ಮನ ಒಲಿಸುವಷ್ಟರಲ್ಲಿ ಸುಸ್ತಾಗಿರುವುದಂತೂ ಸುಳ್ಳಲ್ಲ.

ನಂತರ ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿ ನಿಮ್ಮ ಮನವಿಯನ್ನು ಕೂಡಲೆ ಮುಖ್ಯಮಂತ್ರಿಗಳಿಗೆ ತಿಳಿಸುತ್ತೇವೆ ಎಂದರು. ನಂತರ ಯುವಕರು ಕೆಳಕ್ಕೆ ಬಂದಿದ್ದಾರೆ.

Edited By : Nagesh Gaonkar
PublicNext

PublicNext

03/08/2021 07:38 pm

Cinque Terre

158.55 K

Cinque Terre

8

ಸಂಬಂಧಿತ ಸುದ್ದಿ