ಬೆಳಗಾವಿ : ಜಿಲ್ಲೆಯ ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದಲ್ಲಿ 2019 ರ ಪ್ರವಾಹದಲ್ಲಿ ಮನೆ ಕಳೆದುಕೊಂಡಿದ್ದ ಕೃಷ್ಣಾ ನದಿ ತೀರದ ಗ್ರಾಮದ ನಿರಾಶ್ರಿತರಿಗೆ ಇನ್ನು ಕೂಡ ಪರಿಹಾರ ಸಿಗದಿರುವುದನ್ನು ವಿರೋಧಿಸಿ ಗ್ರಾಮಸ್ಥರು ಶಾಸಕ ಮಹೇಶ್ ಕಮಠಳ್ಳಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಈ ವರ್ಷವೂ ಇದೇ ಗ್ರಾಮ ಮತ್ತೆ ಪ್ರವಾಹಕ್ಕೆ ತುತ್ತಾಗಿದ್ದು,ಪ್ರವಾಹ ಪೀಡಿತ ಪ್ರದೇಶದ ವೀಕ್ಷಣೆಗೆ ತೆರಳಿದ್ದ ಶಾಸಕ ಮಹೇಶ್ ಕುಮಠಳ್ಳಿ ಅವರನ್ನು ಊರಮಂದಿ ತೀವ್ರ ತರಾಟೆಗೆ ತೆಗೆದುಕೊಂಡರು.
ಪರಿಹಾರ ನೀಡಿ ಮುಂದಕ್ಕೆ ಹೋಗಿ, ಪ್ರವಾಹ ತಗ್ಗಿದ ಬಳಿಕ ಬಂದು ಮೊಸಳೆ ಕಣ್ಣೀರು ಒರೆಸುವುದನ್ನ ಬಿಡಿ,ಮೊದಲು 2019 ಪೂರ್ಣ ಪರಿಹಾರ ನೀಡಿ ಎಂದು ಶಾಸಕರ ಮೇಲೆ ಹೌಹಾರಿದರು.ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮಹೇಶ್ ಕಕ್ಕಾಬಿಕ್ಕಿಯಾದರು.
PublicNext
03/08/2021 07:24 pm