ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯೇಂದ್ರಗೆ ಡಿಸಿಎಂ ಪಟ್ಟ ಕಲ್ಪಿಸಲು ಬಿಎಸ್‌ವೈ ಒತ್ತಡ

ನವದೆಹಲಿ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಕಿರಿಯ ಪುತ್ರ ಬಿ.ವೈ. ವಿಜಯೇಂದ್ರಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಪಕ್ಷದ ನಾಯಕರ ಮೇಲೆ ಒತ್ತಡ ಹೇರಿದ್ದಾರೆ.

ಒಂದು ವೇಳೆ ಡಿಸಿಎಂ ಸ್ಥಾನ ಕೊಡಲು ಸಾಧ್ಯವಾಗದಿದ್ದರೆ, ಸಚಿವ ಸ್ಥಾನ ನೀಡಿ ಬೃಹತ್ ಕೈಗಾರಿಕೆ ಮತ್ತು ಗ್ರಾಮೀಣಾಭಿವೃದ್ಧಿ ಖಾತೆಗಳನ್ನು ಕೊಡಬೇಕು ಎಂದು ಬಿಎಸ್‌ವೈ ಆಗ್ರಹಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಜೊತೆಗೆ ಮಧು ಬಂಗಾರಪ್ಪ ಜೆಡಿಎಸ್ ತೊರೆದು ಕಾಂಗ್ರೆಸ್‌ ಸೇರಿರುವುದರಿಂದ ಸೊರಬದ ಶಾಸಕ ಕುಮಾರ್‌ ಬಂಗಾರಪ್ಪ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂಬುದೂ ಯಡಿಯೂರಪ್ಪ ಒತ್ತಾಸೆಯಾಗಿದೆ ಎನ್ನಲಾಗಿದೆ.

ಈ ಬೇಡಿಕೆಗೆ ಸಮ್ಮತಿ ನೀಡುವುದು ಅಥವಾ ನೀಡದೇ ಇರುವುದು ವರಿಷ್ಠರಿಗೆ ಬಿಟ್ಟ ವಿಚಾರ. ನಾಯಕರ ಜೊತೆಗಿನ ಚರ್ಚೆಯ ವೇಳೆ ಬೊಮ್ಮಾಯಿ, ಈ ವಿಷಯ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

Edited By : Vijay Kumar
PublicNext

PublicNext

03/08/2021 04:48 pm

Cinque Terre

65.26 K

Cinque Terre

7

ಸಂಬಂಧಿತ ಸುದ್ದಿ