ನವದೆಹಲಿ: ದೇಶದ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆ ಮುಂಚೂಣಿಗೆ ಬಂದಿದ್ದಾಳೆ. ಒಲಿಂಪಿಕ್ಸ್ ನಲ್ಲಿ ಎರಡು ಪದಕಗಳು ಮಹಿಳೆಯರಿಂದಲೇ ಭಾರತಕ್ಕೆ ದೊರೆತಿವೆ. ಮುಂದಿನ ಲೋಕಸಭೆ ಅವಧಿಗೆ ಮಹಿಳೆಯೇ ದೇಶದ ಪ್ರಧಾನಿಯಾಗಬೇಕು ಎಂದು ಸಮಾಜವಾದಿ ಪಕ್ಷದ ನಾಯಕಿ ಜಯಾ ಬಚ್ಚನ್ ಹೇಳಿದ್ದಾರೆ.
ಇತ್ತೀಚೆಗೆ ನಡೆದಿದ್ದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ವೇಳೆ ಜಯಾ ಬಚ್ಚನ್ ಅವರು ಮಮತಾ ಬ್ಯಾನರ್ಜಿ ಪರ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಸದ್ಯ ಮಮತಾ ಹೆಸರನ್ನು ಉಲ್ಲೇಖಿಸಿ ಜಯಾ ಈ ಮಾತು ಹೇಳಿದ್ದಾರೆ. ಹೀಗಾಗಿ ಈ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗಳು ಶುರುವಾಗಿವೆ.
PublicNext
03/08/2021 11:12 am