ಚಿತ್ರದುರ್ಗ: ನಾಯಕರಿಗೆ ಬ್ಲಾಕ್ ಮೇಲ್ ಮಾಡಿದವರು ಹಾಗೂ ಕೆಲ ಶಾಸಕರನ್ನು ಸೇರಿಸಿ ಟೀ ಪಾರ್ಟಿ ಮಾಡಿದವರೆಲ್ಲ ಮಂತ್ರಿಯಾಗುತ್ತಾರೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ತಮ್ಮ ಬೇಗುದಿ ಹೊರಹಾಕಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಗೂಳಿಹಟ್ಟಿ ಶೇಖರ್ ಅವರು, 2008ರಲ್ಲಿ ಪಕ್ಷೇತರನಾಗಿ ಗೆದ್ದು ಬಿಜೆಪಿ ಸರ್ಕಾರ ರಚನೆಗೆ ನಾನು ಮೊದಲು ಬೆಂಬಲ ನೀಡಿದ್ದೇನೆ. ಹೀಗಾಗಿ ದಕ್ಷಿಣ ಭಾರತದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಕಳೆದ ಬಿಜೆಪಿ ಸರ್ಕಾರದ ವೇಳೆ ನನಗೆ ಅನ್ಯಾಯ ತೀವ್ರ ಆಗಿತ್ತು. ಕೇವಲ ಜವಳಿ ಮತ್ತು ಕ್ರೀಡಾ ಇಲಾಖೆ ನೀಡಿದ್ದ ಸಿಎಂ ಯಡಿಯೂರಪ್ಪ ಕಡಿಮೆ ಅವಧಿಯಲ್ಲಿ ನನ್ನ ಸ್ಥಾನವನ್ನು ವಾಪಸ್ ಪಡೆದಿದ್ದರು. ಮೂಲ ಬಿಜೆಪಿಗರಲ್ಲದ ವಲಸೆ ಶಾಸಕರಿಗೆ ಮಂತ್ರಿ ಸ್ಥಾನ ನೀಡಲಾಗಿತ್ತು ಎಂದು ತಮ್ಮದೇ ನಾಯಕರ ಮೇಲೆ ಆಕ್ರೋಶಿತರಾಗಿದ್ದಾರೆ.
PublicNext
03/08/2021 07:54 am