ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಲ ಬಿಜೆಪಿಗರು, ಹೊರಗಿನಿಂದ ಬಂದವರು ಹಾಲು-ಜೇನು ಇದ್ದಂತೆ: ಕೆ.ಎಸ್ ಈಶ್ವರಪ್ಪ

ಬಾಗಲಕೋಟೆ: ಮೂಲ ಬಿಜೆಪಿ ಕಾರ್ಯಕರ್ತರು ಹಾಲಿದ್ದಂತೆ, ಹೊರಗಿನಿಂದ ಬಂದು ಪಕ್ಷಕ್ಕೆ ಸೇರ್ಪಡೆಗೊಂಡವರು ಜೇನಿದ್ದಂತೆ. ಹಾಲು-ಜೇನು ಸೇರಿದರೆ ಎಷ್ಟು ಸವಿಯಿರುತ್ತದೆಯೋ ಹಾಗೆಯೇ ಇಡೀ ದೇಶದಲ್ಲಿ ಬಿಜೆಪಿಗೆ ಯಾರ್ಯಾರು ಬಂದು ಸೇರಿದ್ದಾರೆಯೋ ಅವರೆಲ್ಲರನ್ನೂ ಒಗ್ಗೂಡಿಸಿಕೊಂಡು ಒಟ್ಟಾಗಿದ್ದೇವೆಯೇ ವಿನಃ ಯಾವುದೇ ವಿಷಯದಲ್ಲಿಯೂ ಗೊಂದಲವಿಲ್ಲ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

ಬದಾಮಿ ಬನಶಂಕರಮ್ಮ ದೇವಸ್ಥಾನಕ್ಕೆ ಕುಟುಂಬ ಸಮೇತವಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದ ಬಿಜೆಪಿ ನಾಯಕರಲ್ಲಿ ಅಸಮಾಧಾನ ಎಂಬ ಪ್ರಶ್ನೆಯೇ ಇಲ್ಲ. ಇನ್ನೆರಡು ಅಥವಾ ಮೂರು ದಿನಗಳಲ್ಲಿ ಕೇಂದ್ರದ ನಾಯಕರು ರಾಜ್ಯಕ್ಕೆ ಬಂದು ಅಸಮಾಧಾನ ಏನೇನಿದೆ ಎಂದು ತಿಳಿದುಕೊಂಡು ನಾಯಕರನ್ನು ಕರೆದು ಕೂರಿಸಿ ಚರ್ಚೆ ಮಾಡಿ ಬಗೆಹರಿಸುತ್ತಾರೆ. ಇಲ್ಲಿ ವಲಸಿಗರು, ಮೂಲದಿಂದಲೇ ಇರುವವರು ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು.

ಕಾಂಗ್ರೆಸ್ ನಾಯಕರಲ್ಲಿ ಗುಂಪುಗಾರಿಕೆ, ಭಿನ್ನಮತ ಇರುವುದೇ ಹೊರತು ಬಿಜೆಪಿಯಲ್ಲಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಪರಮೇಶ್ವರ್, ಎಂ.ಬಿ ಪಾಟೀಲ್ ಇವರು ನಾಲ್ವರು ಮತ್ತು ಇವರ ಬೆಂಬಲಿಗರು ನಾವೇ ಮುಖ್ಯಮಂತ್ರಿ, ನಮ್ಮ ನಾಯಕರೇ ಮುಖ್ಯಮಂತ್ರಿಗಳು ಎನ್ನುತ್ತಿದ್ದಾರೆ. ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುತ್ತಿದ್ದಾರೆ. ಈ ನಾಲ್ವರು ನಾಯಕರು ಮೈಸೂರಿನ ಚಾಮುಂಡಿ ಬೆಟ್ಟದ ಮುಂದೆ ಹೋಗಿ ಹೇಳಲಿ, ನಾವು ಗುಂಪುಗಾರಿಕೆ ಮಾಡುವುದಿಲ್ಲ ಎಂದು ನೋಡೋಣ ಎಂದು ಈಶ್ವರಪ್ಪ ಸವಾಲು ಹಾಕಿದರು.

Edited By : Vijay Kumar
PublicNext

PublicNext

01/08/2021 02:52 pm

Cinque Terre

78.59 K

Cinque Terre

5

ಸಂಬಂಧಿತ ಸುದ್ದಿ