ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿ ಸರ್ಕಾರ ತಾನಾಗಿಯೇ ಪತನವಾದರೆ ನಾವು ಎಲೆಕ್ಷನ್ ಗೆ ರೆಡಿ: ಸಿದ್ದರಾಮಯ್ಯ

ಬೆಳಗಾವಿ: ನಾವು ಎಂದಿಗೂ ಮಧ್ಯಂತರ ಚುನಾವಣೆ ಇಷ್ಟಪಡೋದಿಲ್ಲ. ಆದರೆ, ಒಂದು ವೇಳೆ ಬಿಜೆಪಿ ಸರ್ಕಾರ ತಾನಾಗಿಯೇ ಪತನವಾದರೆ ಚುನಾವಣೆ ಎದುರಿಸಲು ಸಿದ್ಧರಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಜಿಲ್ಲೆಯ ಖಾನಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿದ್ದ ಎಲ್ಲಾ ಸಚಿವರು ಭ್ರಷ್ಟರಾಗಿದ್ದರು. ಪಕ್ಷಾಂತರಗೊಂಡ 17 ಶಾಸಕರ ಬೆಂಬಲ ಪಡೆಯುವ ಮೂಲಕ ಆಪರೇಷನ್ ಕಮಲ ಮೂಲಕ ಅಧಿಕಾರಕ್ಕೆ ಬಂದ ಕಾರಣ ರಾಜ್ಯದ ಬಿಜೆಪಿ ಸರ್ಕಾರ ನ್ಯಾಯಸಮ್ಮತವಾಗಿಲ್ಲ. ಮೊಟ್ಟೆ ಖರೀದಿ ಹಗರಣದಲ್ಲಿ ಶಶಿಕಲಾ ಜೊಲ್ಲೆ ಅವರಿಂದ ಯಡಿಯೂರಪ್ಪ ರಾಜೀನಾಮೆ ಪಡೆಯಲೇ ಇಲ್ಲ ಎಂದರು.

Edited By : Nagaraj Tulugeri
PublicNext

PublicNext

28/07/2021 08:03 pm

Cinque Terre

40.62 K

Cinque Terre

8

ಸಂಬಂಧಿತ ಸುದ್ದಿ