ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕುಮಾರಸ್ವಾಮಿ ಅವಕಾಶವಾದಿ ರಾಜಕಾರಣಿ ,ಯಾವ ಪಾರ್ಟಿಗು ಅಡ್ಜೆಸ್ಟ್ ಆಗ್ತಾರೆ: ಸಚಿವ ಸಿಪಿ ಯೋಗೇಶ್ವರ್ ಹೇಳಿಕೆ

ಮಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಅವಕಾಶವಾದಿ ರಾಜಕಾರಣಿ. ಕುಮಾರಸ್ವಾಮಿ ಒಂದು ತರಹ ಜೋಕರ್ ತರಹ ಇದ್ದಂಗೆ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಹೇಳಿಕೆ ನೀಡಿದ್ದಾರೆ. ಮಂಗಳೂರು ನಗರಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಕುಮಾರಸ್ವಾಮಿ ಯಾವ ಪಾರ್ಟಿಯಾದರೂ ಅಡ್ಜೆಸ್ಟ್ ಮೆಂಟ್ ಆಗುತ್ತಾರೆ. ಅಂದ್ರೆ ಕುಮಾರಸ್ವಾಮಿಗೆ ನೈತಿಕತೆ, ಸಿದ್ಧಾಂತ ಯಾವುದೂ ಇಲ್ಲ ಎಂದ ಅವ್ರು ಸಿಎಂ ಆಗಿದ್ದಾಗ ಕುಮಾರಸ್ವಾಮಿ ಉಡಾಫೆಯಾಗಿ ವರ್ತಿಸಿದ್ದರು. ಕುಮಾರಸ್ವಾಮಿಯವರಿಗೆ ಆತಂಕ ಕಾಡುತ್ತಿದೆ. ದಿನಬೆಳಗೆದ್ದು ಕುಮಾರಸ್ವಾಮಿ ಜನರ ಕಡೆ ಹೋಗುತ್ತಿದ್ದಾರೆ. ಅಧಿಕಾರ ಇದ್ದಾಗ ಏನೂ ಮಾಡಲಿಲ್ಲ ಎಂದರು.

ಅಧಿಕಾರ ಇಲ್ಲದಾಗ ಜನರ ಬಳಿ ಹೋಗಿ ಗೋಳಾಡುವುದು, ಕಣ್ಣೀರು ಹಾಕುವುದು ಅವರ ಗುಣವಾಗಿಬಿಟ್ಟಿದೆ. 2023 ರ ಚುನಾವಣೆಯಲ್ಲಿ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿಗೆ ಬಹುಮತ ಸಿಗಲಿದೆ. ಈ ಮೂಲಕ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಸಂಪೂರ್ಣ ನೆಲಕಚ್ಚುತ್ತದೆ ಎಂಬ ವಿಚಾರ ಅರಿತು ಮಾಜಿ ಸಿಎಂ ಕುಮಾರಸ್ವಾಮಿ ಆತಂಕದಲ್ಲಿದ್ದಾರೆ ಎಂದು ವ್ಯಂಗ್ಯವಾಡಿದ್ರು.

Edited By : Manjunath H D
PublicNext

PublicNext

26/02/2021 12:34 pm

Cinque Terre

78.07 K

Cinque Terre

6

ಸಂಬಂಧಿತ ಸುದ್ದಿ