ತಿರುವನಂತಪುರಂ: ರಾಜಕೀಯ ಕೆಲಸ ಕಾರ್ಯಗಳ ಒತ್ತಡದ ಮಧ್ಯೆಯೂ ಕಾಂಗ್ರಸ್ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಕೊಲ್ಲಂನಲ್ಲಿ ಮೀನುಗಾರರೊಂದಿಗೆ ಸಮುದ್ರಕ್ಕಿಳಿದು ಈಜಾಡಿ ಸಂಭ್ರಮಿಸಿದ್ದಾರೆ.
ಮೀನುಗಾರರು ಸಮುದ್ರಕ್ಕೆ ಇಳಿದು ಮೀನುಗಾರಿಕೆ ತೆರಳಿದ ವೇಳೆ ಜೊತೆಯಾದ ರಾಹುಲ್ ಗಾಂಧಿ ಮೀನುಗಾರರ ಸಮುದ್ರಕ್ಕೆ ಹಾರಿ ಮೀನಿನ ಬಲೆ ಬಿಡಿಸುತ್ತಿದ್ದಂತೆ ತಾವು ನೀರಿಗೆ ಧುಮುಕಿ ಸುಮಾರು 10 ನಿಮಿಷಗಳ ಕಾಲ ನೀರಿನಲ್ಲಿ ಈಜಾಡಿದರು. ರಾಹುಲ್ ಅವರೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಮತ್ತು ಟಿ. ಎನ್ ಪ್ರತಾಪನ್ ಸೇರಿದಂತೆ ಇತರ ನಾಲ್ಕು ಜನ ಕಾಂಗ್ರೆಸ್ ಮುಖಂಡರು ಜೊತೆಗಿದ್ದರು. ರಾಹುಲ್ ಅವರೊಂದಿಗೆ ಒಟ್ಟು 25 ಜನ ಮೀನುಗಾರರೂ ಮೀನುಗಾರಿಕೆಗೆ ತೆರಳಿದ್ದರು. ಸಮುದ್ರದಲ್ಲಿ ಮೀನುಗಾರಿಕೆ ಮಾಡಿ ಮೀನುಗಾರರು ತಯಾರಿಸಿದ ಮೀನಿನ ಖಾದ್ಯವನ್ನು ಸವಿದು ಸಮುದ್ರದಲ್ಲಿ ಕೆಲ ಕಾಲಕಳೆದಿದ್ದಾರೆ.
PublicNext
25/02/2021 09:37 am