ತುಮಕೂರು: ಹಳ್ಳಿಗಳಲ್ಲಿ ಇತ್ತೀಚೆಗೆ ಕೇಸರಿ ಟವಲ್ ಹಾಕಿಕೊಂಡು ಓಡಾಡೋ ಹೊಸ ಸ್ಟೈಲ್ ಶುರುವಾಗಿದೆ ಎಂದು ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ತುರುವೇಕೆರೆ ತಾಲೂಕಿನ ಸೀಗೇಹಳ್ಳಿಯಲ್ಲಿ ಮಾತನಾಡಿದ ಅವರು, ''ದೇವರ ಮೇಲಿನ ಭಕ್ತಿಯಿಂದ ಕೇಸರಿ ಟವಲ್ ಹಾಕಿಕೊಳ್ಳಿ, ತಪ್ಪಿಲ್ಲ. ಆದರೆ ಜನರ ಹಣವನ್ನು ಚುನಾವಣೆಯಲ್ಲಿ ಹಂಚಿದರೆ ಒಳ್ಳೆಯದಾಗಲ್ಲ. ಬಿಜೆಪಿಯವರು ಕೊಡುವ 2-3 ಸಾವಿರ ಹಣ ಹಂಚಿಕೆಗೆ ಕೇಸರಿ ಟವಲ್ ಬಳಸಿದರೆ ದೇವರು ಒಳ್ಳೆಯದು ಮಾಡಲ್ಲ'' ಎಂದು ವಾಗ್ದಾಳಿ ನಡೆಸಿದರು.
ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಹೊಗಳಿದರು. ರೈತರಿಗೆ ಜೀವನ ಮುಡುಪಿಟ್ಟವರಿದ್ದರೆ ಅದು ದೇವೇಗೌಡರು. ಪ್ರಧಾನಿ ಮೋದಿ ಅವರು ಹಾಗೇ ಹೇಳಿದ್ದಾರೆಂದರೆ ತಮಾಷೆ ಮಾತಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ಅವರು, ''ಇಂದು ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಅಧಿಕಾರಿಗಳು 20 ಲಕ್ಷ ರೂ., 30 ಲಕ್ಷ ರೂ. ನೀಡಿ ವರ್ಗಾವಣೆ ಪಡೆಯುತ್ತಿದ್ದಾರೆ. ನಮ್ಮ ಆಡಳಿತದಲ್ಲಿ ಹೀಗೆ ಇರಲಿಲ್ಲ'' ಎಂದರು.
PublicNext
22/02/2021 08:56 pm