ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದರಾಮಯ್ಯನನ್ನು ಉದ್ಧಾರ ಮಾಡಲು ಹೋಗಿ ನಾನು ಹಾಳಾದೆ: ಹಳ್ಳಿಹಕ್ಕಿ

ಮೈಸೂರು:ನಾನು ಹಾಳಾಗಿದ್ದು ಸಿದ್ದರಾಮಯ್ಯನನ್ನು ಉದ್ದಾರ ಮಾಡಲು ಹೋಗಿ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ‌. ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವೇಗೌಡರು ನಿನ್ನನ್ನ ಪಕ್ಷದಿಂದ ಹೊರ ಹಾಕಿದ್ದರು. ನಾನು ಸಾಕಷ್ಟು ಜನರ ಕಾಲು ಹಿಡಿದು ನಿನ್ನನ್ನು ಪಕ್ಷಕ್ಕೆ ಕರೆದು ಕೊಂಡು ಬಂದೆ‌ ನಿನ್ನನ್ನು ಉದ್ಧಾರ ಮಾಡಲು ಹೋಗಿ ನಾನು ಹಾಳಾದೆ ಎಂದು ಕಿಡಿಕಾರಿದರು.

ನೀನೇನು (ಸಿದ್ದರಾಮಯ್ಯ) ದೇವರಾಜ ಅರಸು, ಕೆಂಗಲ್ ಹನುಮಂತಯ್ಯ ಅವರಿಗಿಂತ ದೊಡ್ಡ ನಾಯಕನಲ್ಲ. ಅವರ ಅವಧಿಯಲ್ಲಿ ಆದ ಅಭಿವೃದ್ಧಿಗಳು ದೊಡ್ಡವು. ನಾನು ನಾನು ಅನ್ನೋ ದುರಹಂಕಾರ, ದರ್ಪ ನಿಮ್ಮನ್ನ ಎಲ್ಲಿಗೆ ತಗೊಂಡು ಹೋಗಿದೆ‌ ಎಂದು ಕುಟುಕಿದರು. ದರ್ಪ ದುರಹಂಕಾರದಿಂದಲೇ ಸಿದ್ದರಾಮಯ್ಯ 130 ರಿಂದ 70 ರಷ್ಟು ಸೀಟ್​ಗೆ ಬಂದಿದ್ದಾರೆ. ನಾನೇ ಮುಖ್ಯಮಂತ್ರಿ ನಾನೇ ಆಗ್ತೀನಿ ಅಂತಾರೇ? ದೇವರಾಜ ಅರಸು ಅವರಿಗಿಂತ ದೊಡ್ಡ ಆಡಳಿತಗಾರನಾ ನೀವು‌? ಎಂದು ಪ್ರಶ್ನಿಸಿದರು.

Edited By : Nagaraj Tulugeri
PublicNext

PublicNext

21/02/2021 09:27 am

Cinque Terre

58.96 K

Cinque Terre

5

ಸಂಬಂಧಿತ ಸುದ್ದಿ