ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಕ್ಯಾಪ್ಟನ್ ಸತೀಶ್ ಶರ್ಮಾ (73) ಬುಧವಾರ ರಾತ್ರಿ ಗೋವಾದಲ್ಲಿ ನಿಧನರಾದರು.
ಮೂರು ಬಾರಿ ಲೋಕಸಭೆ ಸಂಸದರಾಗಿದ್ದ ಅವರು ರಾಯ್ ಬರೇಲಿ ಮತ್ತು ಅಮೇಥಿಯಿಂದ ಸ್ಪರ್ಧಿಸಿದ್ದರು. ಕ್ಯಾನ್ಸರ್ ಪೀಡಿತರಾಗಿದ್ದ ಸತೀಶ್ ಶರ್ಮಾ ಅವರು ಕೆಲವು ಕಾಲದಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಪತ್ನಿ, ಮಗ ಹಾಗೂ ಮಗಳನ್ನು ಅವರು ಅಗಲಿದ್ದಾರೆ.
ಗೋವಾದಲ್ಲಿ ರಾತ್ರಿ 8:16ಕ್ಕೆ ನಮ್ಮ ತಂದೆ ನಿಧನರಾದರು. ಶುಕ್ರವಾರ ದೆಹಲಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ' ಎಂದು ಸತೀಶ್ ಶರ್ಮಾ ಅವರ ಮಗ ಸಮೀರ್ ತಿಳಿಸಿದ್ದಾರೆ.
ಆಂಧ್ರ ಪ್ರದೇಶದ ಸಿಕಂದರಾಬಾದ್‌ನಲ್ಲಿ 1947ರ ಅಕ್ಟೋಬರ್ 11ರಂದು ಜನಿಸಿದ ಸತೀಶ್ ಅವರು ವೃತ್ತಿಪರ ಕಮರ್ಶಿಯಲ್ ಪೈಲಟ್ ಆಗಿದ್ದರು. ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರಿಗೆ ಆಪ್ತರಾಗಿದ್ದ ಸತೀಶ್ ಶರ್ಮಾ, 1993ರಿಂದ 1996ರವರೆಗೂ ಪಿ.ವಿ.ನರಸಿಂಹ ರಾವ್ ನೇತೃತ್ವದ ಸರ್ಕಾರದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಕೇಂದ್ರ ಸಚಿವರಾಗಿದ್ದರು.
PublicNext
18/02/2021 09:13 am