ಚಿಕ್ಕಮಗಳೂರು: ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧನಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದು, ಸಿ.ಟಿ.ರವಿ ನಿಮಗೆಲ್ಲಾ ಗೊತ್ತು, ಆದ್ರೆ ದಿಶಾ ರವಿ ಹೆಸರು ಯಾರಿಗೆ ಗೊತ್ತಿತ್ತು ಹೇಳಿ ಎಂದಿದ್ದಾರೆ. ಅರಾಜಕತೆ ಹುಟ್ಟಿ ಹಾಕುವುದು ಪ್ರಜಾಪ್ರಭುತ್ವದ ಲಕ್ಷಣನಾ?, ದಿಶಾ ರವಿ ಬೆಂಬಲಿಸುವ ಕಾಂಗ್ರೆಸ್ನವರಿಗೆ ನಾಚಿಕೆಯಾಗಬೇಕು. ಪ್ರಜಾಪ್ರಭುತ್ವ ಹೋರಾಟಕ್ಕಾಗಿ ಅವಳ ಬಂಧನವಾಗಿಲ್ಲ. ಅರಾಜಕತೆ ಸೃಷ್ಟಿ ಮಾಡಿದ್ದಕ್ಕಾಗಿ ಆಕೆಯ ಬಂಧನವಾಗಿದೆ ಎಂದರು.
ದಿಶಾ ರವಿ ಬಗ್ಗೆ ತನಿಖೆಯಾಗ್ತಿದೆ. ಪ್ರಾರ್ಥಮಿಕ ವರದಿಯಲ್ಲಿ ಅರಾಜಕತೆ ಸೃಷ್ಟಿಸಿದ್ದಾರೆ ಎಂಬುದು ದೃಢವಾದ ಹಿನ್ನೆಲೆ ಬಂಧನವಾಗಿದೆ. ನಮಗೆ ನಮ್ಮ ದೇಶದ ಸಂವಿಧಾನ ದೊಡ್ಡದು, ದೇಶದ ಅಖಂಡತೆ ದೊಡ್ಡದು. ಇಂತಹ ಕೃತ್ಯ ಬೆಂಬಲಿಸಿ ಕಾಂಗ್ರೆಸ್ ತನ್ನ ನಾಯಕರನ್ನ ಕಳೆದುಕೊಂಡಿದೆ. ಅಂತಹದ್ದೇ ಪರಿಸ್ಥಿತಿ ತಂದಿಡುವ ಹೀನ ಕೆಲಸ ಕಾಂಗ್ರೆಸ್ ಮಾಡಬಾರದು. ದೇಶದ ಅಖಂಡತೆಗೆ ಭಂಗ ತರುವ ಯಾವ ಶಕ್ತಿಯನ್ನು ಬೆಂಬಲಿಸಲ್ಲ, ಕ್ಷಮಿಸಲ್ಲ ಎಂದು ಸಿಟಿ ರವಿ ಹೇಳಿದ್ದಾರೆ.
PublicNext
16/02/2021 06:03 pm