ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈಗಲೂ ಸಿದ್ದರಾಮಯ್ಯನವರೇ ನಮ್ಮ ನಾಯಕರು: ರಮೇಶ್‌ ಜಾರಕಿಹೊಳಿ

ಬೆಳಗಾವಿ: ಸಚಿವ ಎಸ್‌.ಟಿ.ಸೋಮಶೇಖರ್‌ ಬೆನ್ನಲ್ಲೇ ಸಚಿವ ರಮೇಶ್‌ ಜಾರಕಿಹೊಳಿ ಅವರು ''ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರೇ ನಮ್ಮ ನಾಯಕರು'' ಎಂದು ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಈಗಲೂ ಸಿದ್ದರಾಮಯ್ಯ ಅವರೇ ನಮ್ಮ ನಾಯಕ. ಅವರೊಂದಿಗೆ ದಿನಕ್ಕೆ ಎರಡು ಬಾರಿಯಾದರೂ ಮಾತನಾಡುತ್ತೇನೆ. ಪಕ್ಷದ ವಿಚಾರಕ್ಕೆ ಬಂದಾಗ ಬಿಜೆಪಿ ನಮ್ಮ ಪಕ್ಷ ಎಂದರು.

ನಾನು ಕಾಂಗ್ರೆಸ್‌ನಲ್ಲಿ 20 ವರ್ಷ ಶಾಸಕನಾಗಿ ಇದ್ದೆ. ಅಷ್ಟೂ ವರ್ಷ ಕಾಂಗ್ರೆಸ್‌ನವರು ನಮ್ಮನ್ನ ಮೂಲೆಗುಂಪು ಮಾಡಿದ್ದರು. ಆದರೆ ಈಗ ಬಿಜೆಪಿಯಲ್ಲಿ ಸ್ವತಂತ್ರವಾಗಿದ್ದೇವೆ. ಕಾಂಗ್ರೆಸ್‌ನ ಟಾಪ್ 1ರಿಂದ 5 ಮಟ್ಟದ ನಾಯಕರು ನಮ್ಮ ಜತೆ ಬರಲು ತಯಾರಿದ್ದಾರೆ. ಬೇಕಾದರೆ ಅವರನ್ನು ಬಿಜೆಪಿಗೆ ಕೆರೆ ತರುತ್ತೇನೆ. ಅವರ ಹೆಸರು ಕೇಳಿದರೆ ಗಾಬರಿ ಆಗುತ್ತೀರಿ ಎಂದು ಹೊಸ ಬಾಂಬ್ ಸಿಡಿಸಿದರು.

Edited By : Vijay Kumar
PublicNext

PublicNext

14/02/2021 08:17 pm

Cinque Terre

94.39 K

Cinque Terre

3

ಸಂಬಂಧಿತ ಸುದ್ದಿ