ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೂ ನನಗೂ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಇದನ್ನು ವೀರಶೈವ ಸಮುದಾಯಕ್ಕೆ ನಾನು ಈ ವೇದಿಕೆಯಲ್ಲಿ ತಿಳಿಸಲು ಬಯಸುತ್ತೇನೆ ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಲೂಟಿ ನಡೆಯುತ್ತಿತ್ತು. ರಾಜ್ಯದ ಸಂಪತ್ತು ಲೂಟಿ ಹೊಡೆಯುತ್ತಿದ್ದಾಗ ನಾನು ದನಿ ಎತ್ತಿದೆ. ಬಿಜೆಪಿಯ ಭ್ರಷ್ಟ ಆಡಳಿತದ ಬಗ್ಗೆ ಮೊದಲು ಹೋರಾಟ ಮಾಡಿದ್ದು ಜೆಡಿಎಸ್. ಎರಡು ಸೂಟ್ ಕೇಸ್‌ಗಳಲ್ಲಿ ದಾಖಲೆಗಳನ್ನು ವಿಧಾನಸೌಧಕ್ಕೆ ಕೊಂಡೊಯ್ದು ದಾಖಲೆ ಬಿಡುಗಡೆ ಮಾಡಿದೆವು ಎಂದರು.
ರಾಜ್ಯದಲ್ಲಿ ಇನ್ನೆಷ್ಟು ಮೀಸಲಾತಿ ಹೋರಾಟ ಶುರುವಾಗುತ್ತದೋ ಗೊತ್ತಿಲ್ಲ. ಸವಿತಾ ಸಮಾಜದವರು, ಉಪ್ಪಾರ ಸಮಾಜದವರೂ ಹೋರಾಟ ಶುರು ಮಾಡುತ್ತಾರೆ. ಹಾಗೇ ಉಳಿದ ಸಮುದಾಯಗಳು ಕೂಡ ಆರಂಭ ಮಾಡುತ್ತಾರೆ ಎಂದು ಹೇಳಿದರು.
PublicNext
14/02/2021 07:32 pm