ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಪ, ಅಜ್ಜಿಯನ್ನು ಕೊಲೆ ಮಾಡಿದ್ದಾರೆಂದು ಹೇಳಲು ಹೆಮ್ಮೆ ಇದೆ: ರಾಹುಲ್

ನವದೆಹಲಿ: ಒಬ್ಬ ಮಾಜಿ ಪ್ರಧಾನಿಯ ಮಗನಾಗಿದ್ದುಕೊಂಡು ನಾನು ನನ್ನ ಸಿದ್ಧಾಂತಗಳ ಮೂಲಕ ರಾಜಕಾರಣ ಮಾಡುತ್ತಿದ್ದೇನೆ. ನಮ್ಮ ಕುಟುಂಬದವರು ಪ್ರಧಾನ ಮಂತ್ರಿಯಾಗಿ ೩೦ ವರ್ಷ ಕಳೆಯಿತು. ಹೀಗಿದ್ದ ಮೇಲೆ ನಮ್ಮದು ಕುಟುಂಬ ರಾಜಕಾರಣ ಹೇಗಾಗುತ್ತದೆ? ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.

ಚಿಕಾಗೊ ವಿಶ್ವವಿದ್ಯಾಲಯದ ಪ್ರೊಫೆಸರ್ ದೀಪೇಶ್ ಚಕ್ರವರ್ತಿ ಅವರೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ರಾಹುಲ್ ಗಾಂಧಿ ಕೆಂಡಾಮಂಡಲರಾಗಿದ್ದಾರೆ. ಯಾವುದೋ ವಿಚಾರದ ಕುರಿತು ಸಮರ್ಥಿಸಿಕೊಳ್ಳುವಾಗ ತಂದೆ ರಾಜೀವ್ ಗಾಂಧಿ ಹಾಗೂ ಅಜ್ಜಿ ಇಂದಿರಾ ಗಾಂಧಿ ಅವರನ್ನು ಹತ್ಯೆ ಮಾಡಲಾಯಿತು ಎಂದು ಹೇಳಲು ನನಗೆ ಹೆಮ್ಮೆ ಎನ್ನಿಸುತ್ತದೆ. ಇದರಿಂದಾಗಿ ಅವರನ್ನು ಅರ್ಥ ಮಾಡಿಕೊಳ್ಳಲು ಹಾಗೂ ನನ್ನ ಸ್ಥಾನಮಾನವನ್ನು ಅರಿಯಲು, ಮುಂದೆ ಏನು ಮಾಡಬೇಕು ಎಂಬುದನ್ನು ತಿಳಿಯಲು ಸಹಾಯವಾಗುತ್ತಿದೆ. ಇದರಿಂದ ನನಗೆ ಯಾವುದೇ ವಿಷಾದವಿಲ್ಲ ಎಂದು ಹೇಳಿದ್ದಾರೆ.

ಟ್ರೋಲ್ ಗಳು ನಾನು ಏನು ಮಾಡಬೇಕು ಎಂಬುದರ ಕುರಿತು ನನ್ನ ಪ್ರಜ್ಞೆಯನ್ನು ಜಾಗೃತಗೊಳಿಸುತ್ತವೆ. ಬಹುತೇಕ ಅವರೇ ಮಾರ್ಗದರ್ಶ ಮಾಡುತ್ತಾರೆ. ನಾನು ಎಲ್ಲಿಗೆ ಹೋಗಬೇಕು ಎಂಬುದರ ಕುರಿತು ಅವರೇ ಹೇಳುತ್ತಾರೆ. ಅಲ್ಲದೆ ಯಾವುದರ ಬೆಂಬಲವಾಗಿ ನಿಲ್ಲಬೇಕು ಎಂಬುದನ್ನೂ ತಿಳಿಸುತ್ತಾರೆ. ಹೀಗಾಗಿ ಇದು ಒಂದು ಪರಿಷ್ಕರಣೆ ಹಾಗೂ ವಿಕಸನದ ದಾರಿಯಾಗಿದೆ ಎಂದು ಟ್ರೋಲ್ ಮಾಡುವವರು ಕುರಿತು ಸಹ ಮಾತನಾಡಿದ್ದಾರೆ.

ಕಳೆದ ಬಾರಿಯ ಯುಪಿಎ ಸರ್ಕಾರದ ಅವಧಿಯಲ್ಲಿ ಸಹ ಬೇರೆಯವರೇ ಪ್ರಧಾನಿಯಾಗಿದ್ದಾರೆ. ನನಗೆ ಸೈದ್ಧಾಂತಿಕ ದೃಷ್ಟಿಕೋನವಿದೆ. ಅಂತಹ ಐಡಿಯಾಗಳನ್ನಿಟ್ಟುಕೊಂಡು ನಾನು ಹೋರಾಟ ನಡೆಸಬೇಕಿದೆ. ನನ್ನ ಅಜ್ಜಿ, ತಂದೆ ಹಾಗೂ ಕುಟುಂಬಕ್ಕಿಂತ ಮಿಗಿಲಾಗಿ ನನಗೆ ನಾನು ನಂಬಿದ ವಿಚಾರಗಳೇ ಮುಖ್ಯ ಎಂದರು ರಾಹುಲ್ ಗಾಂಧಿ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

13/02/2021 02:15 pm

Cinque Terre

62.67 K

Cinque Terre

30

ಸಂಬಂಧಿತ ಸುದ್ದಿ