ಬಾಗಲಕೋಟೆ: ಬಳ್ಳಾರಿ ಜಿಲ್ಲೆ ವಿಭಜನೆಯಿಂದ ನಾನೇನು ಮಂಕಾಗಿಲ್ಲ. ಮತ್ತೆ ಈ ಶ್ರೀರಾಮುಲು ಚೆಂಡಿನಂತೆ ಪುಟಿದೆದ್ದು ಬರ್ತಾನೆ ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ಬಾದಾಮಿ ತಾಲ್ಲೂಕಿನ ಮುಷ್ಠಿಗೇರಿ ಗ್ರಾಮದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆ ವಿಭಜನೆ ನಂತರ ಪಕ್ಷದಲ್ಲಿ ಆನಂದ್ ಸಿಂಗ್ ಮೇಲುಗೈ ಸಾಧಿಸಿದ್ದಾರಾ? ಎಂಬ ಪ್ರಶ್ನೆಗೆ ಶ್ರೀರಾಮುಲು ಈ ರೀತಿ ಉತ್ತರಿಸಿದ್ದಾರೆ. ಬಳ್ಳಾರಿ ಜಿಲ್ಲೆ ಕಾಂಗ್ರೆಸ್ಸಿನ ಭದ್ರ ಕೋಟೆಯಾಗಿತ್ತು. ಈಗ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಸಂಪೂರ್ಣ ನೆಲಕಚ್ಚುವಂತೆ ಮಾಡಿದ್ದು ಶ್ರೀರಾಮುಲು. ಇದು ನಮ್ಮ ಪಕ್ಷದ ಶಕ್ತಿ.
PublicNext
13/02/2021 08:09 am