ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಂದಮ್ಮನ ಚಿಕಿತ್ಸೆಗೆ ಮಿಡಿದ ಪ್ರಧಾನಿ ಮೋದಿ: ಪೋಷಕರಿಗೆ 6 ಕೋಟಿ ರೂ. ಹೊರೆ ಇಳಿಕೆ

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಮುಂಬೈನ ಐದು ತಿಂಗಳ ಕಂದಮ್ಮನ ಚಿಕಿತ್ಸೆಗಾಗಿ ಮಿಡಿದಿದ್ದಾರೆ.

ಮಾಂಸಖಂಡ ದೌರ್ಬಲ್ಯದ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿ ತೀರಾ ಕಾಮತ್‌ ಚಿಕಿತ್ಸೆಗೆ ಪ್ರಧಾನಿ ಮೋದಿ ಅವರು ಔಷಧಗಳ ಮೇಲಿನ ಆಮದು ಶುಲ್ಕ ರದ್ದು ಮಾಡುವ ಮೂಲಕ ನೆರವಾಗಿದ್ದಾರೆ. ಬಾಲಕಿ ಸ್ಪೈನಲ್‌ ಮಸ್ಕ್ಯೂಲರ್‌‌ ಅಟ್ರೋಫಿ ಎನ್ನುವ ಮಾಂಸಖಂಡ ದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಿದೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿರುವ ಈ ಮಗುವಿಗೆ ದುಬಾರಿ ಚಿಕಿತ್ಸೆ ಅಗತ್ಯ ಇದೆ. ಅಂದಾಜು 16 ಕೋಟಿ ರೂ. ವೆಚ್ಚ ತಗುಲಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಈ ಬೃಹತ್‌ ಮೊತ್ತದಲ್ಲಿ ಶೇ.23 ಆಮದು ಸುಂಕ ಮತ್ತು ಶೇ. 12 ಜಿಎಸ್‌ಟಿ ಸೇರಿ 6 ಕೋಟಿ ರೂ. ಆಗುತ್ತದೆ. ವೈದ್ಯಕೀಯ ಖರ್ಚು ಎಷ್ಟೇ ದುಬಾರಿಯಾದರೂ ಮಗಳನ್ನು ಉಳಿಸಿಕೊಳ್ಳುವ ಹಠಕ್ಕೆ ಬಿದ್ದಿರುವ ಪೋಷಕರು, ಆಮದು ಔಷಧಗಳ ಮೇಲಿನ 6 ಕೋಟಿ ರೂ. ಶುಲ್ಕ ಮನ್ನಾ ಮಾಡಲು ಸಾಮಾಜಿಕ ಮಾಧ್ಯಮ ತಾಣಗಳ ಮೂಲಕ ಪ್ರಧಾನಿ ಮೋದಿ ಅವರನ್ನು ಕೋರಿದ್ದರು. ಈ ನಡುವೆ, ಮಗುವಿನ ಸ್ಥಿತಿಗೆ ಮಿಡಿದ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್‌ ಕೂಡ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಶುಲ್ಕ ವಿನಾಯಿತಿ ನೀಡುವಂತೆ ವಿನಂತಿಸಿದ್ದರು.

ಇದಕ್ಕೆ ಸ್ಪಂದಿಸಿದ ಪ್ರಧಾನಿ ಮೋದಿ ಅವರು ಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ಔಷಧಗಳ ಆಮದು ಶುಲ್ಕವನ್ನು ತಕ್ಷಣ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಪ್ರಿಯಾಂಕಾ ಮತ್ತು ಮಿಹಿರ್‌ ಕಾಮತ್‌ ದಂಪತಿ ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Edited By : Vijay Kumar
PublicNext

PublicNext

12/02/2021 03:25 pm

Cinque Terre

62.78 K

Cinque Terre

9

ಸಂಬಂಧಿತ ಸುದ್ದಿ