ಬೆಂಗಳೂರು: ಒಂದು ವೇಳೆ ಕುವೆಂಪು ಬದುಕಿದ್ದರೆ ಈ ಸರ್ಕಾರ ಅವರನ್ನು ದೇಶದ್ರೋಹಿಗಳ ಸಾಲಿನಲ್ಲಿ ನಿಲ್ಲಿಸುತಿತ್ತು ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರ ರೈತರ ಪ್ರತಿಭಟನೆ ದೀರ್ಘಕಾಲ ನಡೆಯುತ್ತಿದೆ ಎಂದರೆ ಅದರ ಗಂಭೀರತೆಯನ್ನು ಅರಿತುಕೊಳ್ಳಬೇಕು. ದಲ್ಲಾಳಿಗಳ ಹೋರಾಟ, ನಕಲಿ ರೈತರ ಹೋರಾಟ,ದೇಶದ್ರೋಹಿಗಳ ಹೋರಾಟ ಎಂದು ಸರ್ಕಾರ ಸುಳ್ಳು ಪ್ರಚಾರ ಮಾಡುವುದರಲ್ಲಿ ಅರ್ಥವಿಲ್ಲ ಎಂದರು.
ರೈತರ ಹೋರಾಟ ನಕಲಿಯಾಗಿದ್ದರೆ ಪ್ರಧಾನಿಯವರು ಮಾತುಕತೆಗೆ ಬನ್ನಿ ಎಂದು ಕರೆಯುತ್ತಿರುವುದು ಯಾರನ್ನು.?ಅನ್ನದಾತನನ್ನು ದೇಶದ್ರೋಹಿಗಳ ಸಾಲಿನಲ್ಲಿ ನಿಲ್ಲಿಸಿದ ಸರ್ಕಾರ ರೈತ ಪರವಾಗಿರಲು ಎಂದೂ ಸಾಧ್ಯವಿಲ್ಲ.ಕೇಂದ್ರದ ರೈತ ವಿರೋಧಿ ಧೋರಣೆಯಿಂದ ಇಂದು ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಅನುಭವಿಸುತ್ತಿದೆ. ಮೋದಿಯವರು ಕಾರ್ಪೋರೆಟ್ ಕಂಪೆನಿಗಳ ದಲ್ಲಾಳಿಯಂತೆ ವರ್ತಿಸುವುದು ಬಿಟ್ಟು ಜನನಾಯಕನಂತೆ ವರ್ತಿಸಲಿ ಎಂದು ದಿನೇಶ್ ಗುಂಡುರಾವ್ ತಿಳಿ ಹೇಳಿದರು.
PublicNext
07/02/2021 08:27 pm