ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೃಷಿ ಕಾನೂನಿಗೆ ಅಮೇರಿಕ ಬೆಂಬಲ : ತೆಂಡೂಲ್ಕರ್ ಒಗ್ಗಟ್ಟಿನ ಮಂತ್ರ... ಕಾಂಗ್ರೆಸ್ ಷಡ್ಯಂತ್ರ

ಪಬ್ಲಿಕ್ ನೆಕ್ಸ್ಟ್ ವಿಶ್ಲೇಷಣೆ : ಕೇಶವ ನಾಡಕರ್ಣಿ

ಕೇಂದ್ರ ಸರಕಾರದ ನೂತನ ಕೃಷಿ ಕಾನೂನು ಈಗ ಅಂತಾರಾಷ್ಟ್ರೀಯ ಮಟ್ಟದ ಚರ್ಚಾ ವಿಷಯವಾಗಿದೆ. ಏಳು ದಶಕಗಳ ಕಾಲ ರೈತರ ಬದುಕನ್ನೇ ನಾಶ ಮಾಡಿದ ಕಾಂಗ್ರೆಸ್ ಪಕ್ಷ ಹಿಂಸೆಯನ್ನು ಪ್ರಚೋದಿಸುವ ಮೂಲಕ ಈಗ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ.

ಏತನ್ಮಧ್ಯ ಭಾರತದ ಕೃಷಿ ಸುಧಾರಣೆಗಳ ಮಹತ್ವವನ್ನು ಗುರುತಿಸಿದ ಅಮೆರಿಕ, ಮೋದಿ ಸರ್ಕಾರ ಅಂಗೀಕರಿಸಿದ ಮೂರು ಕೃಷಿ ಕಾನೂನುಗಳಿಗೆ ಬುಧವಾರ ಬೆಂಬಲ ವ್ಯಕ್ತಪಡಿಸಿದೆ. ಭಾರತದ ಮಾರುಕಟ್ಟೆಗಳ ದಕ್ಷತೆಯನ್ನು ಸುಧಾರಿಸುವ ಮತ್ತು ಹೆಚ್ಚಿನ ಖಾಸಗಿ ವಲಯದ ಹೂಡಿಕೆಯನ್ನು ಆಕರ್ಷಿಸುವ ಕ್ರಮಗಳನ್ನು ಸ್ವಾಗತಿಸುವುದಾಗಿ ಜೋ ಬಿಡೆನ್ ಆಡಳಿತ ಬುಧವಾರ ತಿಳಿಸಿದ್ದು ಮಹತ್ಚದ ಬೆಳವಣಿಗೆಯಾಗಿದೆ.

ಆದರೆ ಭಾರತ ಆಂತರಿಕ ವಿಷಯದಲ್ಲಿ ವಿದೇಶಿ ಪಟ್ಟಭದ್ರ ಹಿತಾಸಕ್ತಿಗಳ ಹಸ್ತಕ್ಷೇಪವನ್ನು ವಿರೋಧಿಸುವಂತೆ ಅಮೇರಿಕದ ಮೂಗು ತೂರಿಸುವಿಕೆಯನ್ನೂ ನಾವು ಅಷ್ಟೇ ಕಠಿಣವಾಗಿ ವಿರೋಧಿಸಬೇಕಾಗಿದೆ.

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ರವಿಶಾಸ್ತ್ರಿ ಹಾಗೂ ಅನಿಲ ಕುಂಬ್ಳೆ ಈಗ ರಾಜಕೀಯ ಮೈದಾನಕ್ಕಿಳಿದು ರೈತರ ಹೋರಾಟ ಹಾಗೂ ಹಿಂಸಾಚಾರ ಬೆಂಬಲಿಸುತ್ತಿರುವವರಿಗೆ ಖಡಕ್ ಉತ್ತರ ನೀಡಿದ್ದಾರೆ. ಈ ಮೂವರು ಹ್ಯಾಶ್ ಟ್ಯಾಗ್ ಬಳಸಿ ಮಾಡಿದ ಟ್ವೀಟ್ " ಇಂಡಿಯಾ ಟುಗೆದರ್ '' " ಇಂಡಿಯಾ ಅಗೆನೆಸ್ಟ್ ಪ್ರೊಪಗೆಂಡಾ'' ಕಾಂಗ್ರೆಸ್ ನಾಯಕ ಶಶಿ ತರೂರ್ ಅವರನ್ನು ಕೆರಳಿಸಿದೆ.

ಇದಕ್ಕೆ ಪ್ರತಿಯಾಗಿ "ಅಪ್ರಬುದ್ಧತೆ ಮತ್ತು ಪ್ರಜಾಪ್ರಭುತ್ವ ವಿರೋಧಿ ವರ್ತನೆಯಿಂದ ಭಾರತದ ಜಾಗತಿಕ ಚಿತ್ರಣಕ್ಕೆ ಹಾನಿಯಾಗಿದೆ" ತೆಂಡೂಲ್ಕರ್, ಶಾಸ್ತ್ರಿ ಹಾಗೂ ಕುಂಬ್ಳೆ ಅವರಂತಹ ಕ್ರಿಕೇಟಿಗರ ಟ್ವೀಟ್ಗಳಿಂದ ಅದನ್ನು ಸರಿಪಡಿಸಲು ಸಾಧ್ಯವಿಲ್ಲ'' ತರೂರ ಟ್ವೀಟ್ ಮಾಡಿ ಕ್ರಿಕೇಟಿಗರ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ.

ರೈತರ ಹೋರಾಟ ಬೆಂಬಲಿಸುವ ನೆಪದಲ್ಲಿ ಭಾರತದ ವಿರುದ್ಧ ವಿಷ ಕಾರುತ್ತಿರುವ ರಾಷ್ಟ್ರಗಳು, ಸಂಘಟನೆ ಹಾಗೂ ಹಣಕ್ಕಾಗಿ ಬಟ್ಟೆ ಬಿಚ್ಚುವ ನೀಲಿ ತಾರೆಯರ ಟ್ವೀಟ್ ಗಳಿಗೆ ಇದೇ ಕಾಂಗ್ರೆಸ್ ನಾಯಕರು ದನಿಗೂಡಿಸುತ್ತಿರುವುದು ಆ ಪಕ್ಷದ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಹೋರಾಟ ಬೆಂಬಲಿಸುವ ನೆಪದಲ್ಲಿ ಕೆಲವು ವಿದೇಶಿ ಶಕ್ತಿಗಳು ಹಿಂಸಾಚಾರ ಅನುಮೋದಿಸುತ್ತಿದ್ದಾರೆಂಬುದು ಈ ಕಾಂಗ್ರೆಸ್ಸಿಗರು ಅರಿಯಬೇಕಾಗಿದೆ.

ಗಾಯಕ-ನಟಿ ರಿಹಾನ್ನಾ, ಮಾಜಿ ನೀಲಿಚಿತ್ರ ತಾರೆ ಮಿಯಾ ಖಲೀಫಾ 'ರೈತ' ಪ್ರತಿಭಟನೆಗಳನ್ನು ಬೆಂಬಲಿಸುವ ಹೆಸರಿನಲ್ಲಿ ಹಿಂಸಾಚಾರವನ್ನು ಅನುಮೋದಿಸುವ ಮೂಲಕ ದೇಶದ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ.

ಆದರೆ ಭಾರತದ ರೈತರ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಹೇಳಿ ಟ್ವೀಟ್ ಮಾಡಿದ್ದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಗ್ರೇಟಾ ಥನ್ ಬರ್ಗ್ ಗೆ ತನ್ನ ತಪ್ಪಿನ ಅರಿವಾಗಿದ್ದರಿಂದ ತನ್ನ ಎಲ್ಲ ಟ್ವೀಟ್ ಡಿಲೀಟ್ ಮಾಡಿದ್ದಾಳೆ. ಇದರಿಂದ ಅಂತಾರಾಷ್ಟ್ರೀಯ ಮಟ್ಟದ ಸೆಲೆಬ್ರಟಿಗಳೆಂದು ಹೇಳಿಕೊಳ್ಳುವವರಿಗೆ ಭಾರಿ ಹಿನ್ನಡೆ ಉಂಟಾಗಿದೆ.

Edited By :
PublicNext

PublicNext

04/02/2021 01:24 pm

Cinque Terre

90.31 K

Cinque Terre

21

ಸಂಬಂಧಿತ ಸುದ್ದಿ