ನವದೆಹಲಿ: ರೈತರ ಪ್ರತಿಭಟನೆಯನ್ನು ಬೆಂಬಲ ಸೂಚಿಸಿದ ಖ್ಯಾತ ಗಾಯಕಿ ರಿಹಾನ್ನಾ ವಿರುದ್ಧ ದೇಶದ ಹಾಗೂ ಕ್ರಿಕೆಟ್ ತಾರೆಯರು ಕಿಡಿಕಾರಿದ್ದಾರೆ. ಅವರ ಈ ನಡೆಯನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಕುಟುಕಿದ್ದಾರೆ.
ಭಾರತ ಸರ್ಕಾರವು ರೈತರ ಪ್ರತಿಭಟನೆ ಬಗ್ಗೆ ಮಾತನಾಡುವ ವಿದೇಶಿಯರಿಗೆ ಪ್ರತಿಕ್ರಿಯಿಸುವಂತೆ ದೇಶದ ಸೆಲೆಬ್ರೆಟಿಗಳನ್ನು ಮಾಡುತ್ತಿರುವುದು ನಿಜಕ್ಕೂ ಮುಜುಗರವನ್ನುಂಟು ಮಾಡುತ್ತಿದೆ. ಕೇಂದ್ರ ಸರ್ಕಾರದ ಅಪ್ರಬುದ್ಧತೆ ಹಾಗೂ ಪ್ರಜಾಪ್ರಭುತ್ವ ವಿರೋಧಿ ಕ್ರಮಗಳಿಂದ ಜಾಗತಿಕ ಮಟ್ಟದಲ್ಲಿ ಭಾರತದ ಚಿತ್ರಣಕ್ಕೆ ಆಗಿರುವ ಹಾನಿಯನ್ನು ಕ್ರಿಕೆಟಿಗರ ಟ್ವೀಟ್‌ಗಳಿಂದ ಪರಹರಿಸಲಾಗದು ಎಂದು ಸಂಸದ ಶಶಿ ತರೂರ್ ವಾಗ್ದಾಳಿ ನಡೆಸಿದ್ದಾರೆ.
ವಿದೇಶಿಯರ ಅಪಪ್ರಚಾರದ ವಿರುದ್ಧ ಬಾಲಿವುಡ್ ಹಾಗೂ ಕ್ರಿಕೆಟ್ ತಾರೆಯರು ಟ್ವೀಟ್ ಮಾಡಿದ್ದರು. ಇದು ಪರೋಕ್ಷವಾಗಿ ಸರ್ಕಾರಕ್ಕೆ ಬೆಂಬಲ ಸೂಚಿಸುವಂತಾಗಿತ್ತು. ಭಾರತದ ಜಾಗತಿಕ ಚಿತ್ರಣಕ್ಕೆ ಉಂಟಾಗಿರುವ ಹಾನಿಯನ್ನು ಕ್ರಿಕೆಟಿಗರ ಟ್ವೀಟ್‌ಗಳಿಂದ ಪರಿಹರಿಸಲಾಗದು ಎಂದು ಹೇಳಿದ್ದಾರೆ.
PublicNext
04/02/2021 11:33 am