ನವದೆಹಲಿ: ಇಲ್ಲಿನ ಸಿಂಘು ಗಡಿಯಲ್ಲಿ ನಡೆಯುತ್ತರುವ ರೈತರ ಪ್ರತಿಭಟನೆ ಬಗ್ಗೆ ಅಂತಾರಾಷ್ಟ್ರೀಯ ತಾರೆಯರು ಟ್ವೀಟ್ ಮಾಡಿ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಇದರ ಬೆನ್ನಲ್ಲೇ ಭಾರತದ ಆಂತರಿಕ ವಿಷಯದಲ್ಲಿ ಬೇರೆಯವರು ಮೂಗು ತೂರಿಸುವುದು ಬೇಡ ಎಂದು ಭಾರತೀಯ ಸ್ಟಾರ್‌ಗಳು ಟಾಂಗ್ ನೀಡಿದ್ದಾರೆ. ಇದಕ್ಕೆ ಖ್ಯಾತ ಕ್ರಿಕೆಟಿಗೆ ಸಚಿನ್ ತೆಂಡೂಲ್ಕರ್ ಕೂಡ ಜೈ ಜೋಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಭಾರತದ ಸಾರ್ವಭೌಮತ್ವವನ್ನು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಹೊರಗಿನ ಶಕ್ತಿಗಳು ಈ ವಿಷಯದಲ್ಲಿ ನೋಡುಗರೇ ಹೊರತು ಪಾಲುದಾರರಲ್ಲ. ಭಾರತೀಯರಿಗೆ ಭಾರತ ಏನೆಂಬುದು ಗೊತ್ತಿದೆ. ಅದಕ್ಕೆ ಬೇಕಿರುವ ನಿರ್ಧಾರಗಳನ್ನು ತೆಗೆದುಕೊಳ್ಳುವುದೂ ಕೂಡ ತಿಳಿದಿದೆ. ಒಂದು ದೇಶವಾಗಿ ನಾವು ಒಗ್ಗಟ್ಟಾಗಿರೋಣ ಎಂದು ಟ್ವೀಟ್ ಮಾಡಿದ್ದಾರೆ.
PublicNext
03/02/2021 09:13 pm