ನವದೆಹಲಿ: ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾಸ್ತವ ಅವರ ಟ್ವೀಟ್ ಟ್ಯಾಗ್ ಮಾಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಡಿರುವ ಟ್ವೀಟ್ ಒಂದು ಇದೀಗ ಭಾರೀ ಸದ್ದು ಮಾಡ್ತಿದೆ..!
ಭಾರತದ ಏಕತೆಯನ್ನು ಹಾಳುಗೆಡವಲು ಮಾಡುವ ಅಪಪ್ರಚಾರಗಳು ಗೆಲುವು ಸಾಧಿಸೋದಿಲ್ಲ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. ಭಾರತ ಹೊಸ ಎತ್ತರಗಳಿಗೆ ಏರುವುದನ್ನು ತಡೆಯಲು, ಭಾರತ ಅಭಿವೃದ್ಧಿ ಸಾಧಿಸುವುದನ್ನು ತಡೆಯಲು ಯಾವುದೇ ಅಪಪ್ರಚಾರಕ್ಕೂ ಸಾಧ್ಯವಿಲ್ಲ ಅನ್ನೋದು ಅಮಿತ್ ಶಾ ಅವರ ಟ್ವೀಟ್‌ನ ಸಾರಾಂಶವಾಗಿದೆ. ಇನ್ನು ಅಮಿತ್ ಶಾ ಅವರು ಟ್ಯಾಗ್ ಮಾಡಿರುವ ಅನುರಾಗ್ ಶ್ರೀವಾಸ್ತವ ಅವರ ಟ್ವೀಟ್‌ನಲ್ಲಿ ಕೃಷಿ ಕಾಯ್ದೆಗಳು ಹಾಗೂ ರೈತ ಪ್ರತಿಭಟನೆಗಳ ಕುರಿತಾಗಿ ಸಮಗ್ರ ವಿವರ ಇದೆ.
PublicNext
03/02/2021 08:56 pm