ಬಂಟ್ವಾಳ: ಸಿದ್ದರಾಮಯ್ಯನವರು ನಿದ್ದೆಯಲ್ಲಿದ್ದಾರೆ ಎಬ್ಬಿಸಿದರೆ ನಾನು ಮುಖ್ಯಮಂತ್ರಿ ಎನ್ನುತ್ತಿದ್ದಾರೆ. ಹಾಗೆಯೇ ರಮಾನಾಥ ರೈ ಮಂತ್ರಿ ಅಂದುಕೊಳ್ತಿದ್ದಾರೆ. ಜನರು ನಿಮ್ಮನ್ನು ಸೋಲಿಸಿದ ಮೇಲೆ ಅದನ್ನು ಒಪ್ಪಿಕೊಳ್ಳಿ, ಗೆದ್ದವರ ಕಾರ್ಯಕ್ಕೆ ಅಡ್ಡಿ ಏಕೆ ಎಂದು ಸಚಿವ ಈಶ್ವರಪ್ಪ ಬಂಟ್ವಾಳದಲ್ಲಿ ಪ್ರಶ್ನಿಸಿದ್ದಾರೆ.
ಕುಡಿಯುವ ನೀರು ಸರಬರಾಜು ಉದ್ಘಾಟನೆಗೆ ಆಗಮಿಸಿದ ವೇಳೆ ಮಾತನಾಡಿದ ಅವರು, ಶನಿವಾರ ಬಂಟ್ವಾಳದ ಸರಪಾಡಿಯಲ್ಲಿ ಕುಡಿಯುವ ನೀರು ಸರಬರಾಜು ಘಟಕಕ್ಕೆ ಪ್ರವೇಶಿಸಲು ಯತ್ನಿಸಿದ ರೈ ಕುರಿತು ಉಲ್ಲೇಖಿಸಿದ ಅವರು, ರಮಾನಾಥ ರೈಗಳು ಇನ್ನೂ ಮಂತ್ರಿಯಾಗಿದ್ದೇನೆ ಹಾಗೂ ತಾನಿನ್ನೂ ಮುಖ್ಯಮಂತ್ರಿಯಾಗಿದ್ದೇನೆ ಎಂದು ಸಿದ್ಧರಾಮಯ್ಯ ಭ್ರಮೆಯಲ್ಲಿದ್ದಾರೆ ಎಂದರು. ಇಬ್ಬರೂ ಕನಸಿನಲ್ಲಿ ಮುಖ್ಯಮಂತ್ರಿ, ಮಂತ್ರಿಯಾಗುತ್ತಿದ್ದಾರೆ. ಚುನಾವಣೆಯಲ್ಲಿ ಜನ ನಿಮ್ಮನ್ನು ಸೋಲಿಸಿದ್ದಾರೆ ಇನ್ನೂ ನಿಮಗೆ ಬುದ್ಧಿ ಬಂದಿಲ್ಲವೇ, ರಮಾನಾಥ ರೈಗಳೇ ಹುಷಾರಾಗಿರಿ, ಜನ ಸೋಲಿಸಲು ತಯಾರಾಗಿದ್ದಾರೆ. ಡೆಪಾಸಿಟ್ ಕಳೆದುಕೊಳ್ಳುತ್ತೀರಿ ಎಂದು ಎಚ್ಚರಿಸಿದರು. ಶಾಸಕರ ಕಾರ್ಯಚಟುವಟಿಕೆಗಳಿಗೆ ಅಡ್ಡಿಪಡಿಸುವುದು ಸರಿಯಲ್ಲ. ಬಿಜೆಪಿಯ ಅಭಿವೃದ್ಧಿಗೆ ರಾಜ್ಯದ ಜನರ ಬೆಂಬಲ ಇದೆ ಎಂದರು.
150 ಸೀಟ್ ಗ್ಯಾರಂಟಿ: ಈಗಲೇ ಚುನಾವಣೆಯಾದರೂ ಬಿಜೆಪಿ 150 ಸೀಟ್ ಗೆಲ್ಲುವುದು ಗ್ಯಾರಂಟಿ ಎಂದ ಈಶ್ವರಪ್ಪ, ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದ್ದಾರೆ, ನಳಿನ್ ಕುಮಾರ್ ಕಟೀಲ್ ಅವರು ಸಂಘಟನೆಯನ್ನು ಬಲಪಡಿಸುತ್ತಿದ್ದಾರೆ. ಈ ಕಾರಣದಿಂದ ರಾಜ್ಯದಲ್ಲಿ ಬಿಜೆಪಿ ಬೆಳೆಯುತ್ತಿದ್ದು, ಅಭಿವೃದ್ಧಿ ಮತ್ತು ಸಂಘಟನೆ ಮೂಲಕ ಮುಂದಿನ ಚುನಾವಣೆಯಲ್ಲಿ ಪೂರ್ಣ ಬಹುಮತ ಬರಲಿದ ಎಂದರು.
PublicNext
31/01/2021 05:35 pm