ಕೋಲಾರ: 'ಉಪವಾಸ ಇರೋನಿಗೆ ಊಟ ಬೇಡ, ಊರಿಗೆ ಶಾಲೆ ಬೇಡ, ಕೇವಲ ರಾಮಮಂದಿರ ಕಟ್ಟಿದರೆ ಸಾಕು ಎನ್ನುವಂತೋರಿಗೆ ಈ ದೇಶ ಆಳಲು ಬಿಟ್ಟಿದ್ದೇವೆ. ರೈತರು, ಸೈನಿಕರು ಗೌರವದಿಂದ ಬದುಕಲು ಅವಕಾಶ ನೀಡದಿರೋದು ಒಂದು ದೇಶವೇ?' ಎಂದು ಶಾಸಕ ಕೆ. ಆರ್. ರಮೇಶ್‌ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಸುಗಟೂರು ಸೊಸೈಟಿ ಆಶ್ರಯದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು ಮಾತನಾಡಿದರು.
ದಿಲ್ಲಿ ರೈತರ ಹೋರಾಟದ ಕುರಿತು ಮಾತನಾಡಿದ ಅವರು, ಮಾಧ್ಯಮಗಳು ಒಂದು ಲಕ್ಷ ಟ್ರ್ಯಾಕ್ಟರ್ ಒಂದೆಡೆ ಸೇರಿಸುವ ರೈತರ ನೋವಿನ ಕುರಿತು ಸುದ್ದಿಯಾಗುತ್ತಿಲ್ಲ. ಕೇವಲ ಯಾವನೋ ಒಬ್ಬ ಕಿಡಿಗೇಡಿ ಕೆಂಪು ಕೋಟೆ ಮೇಲೆ ಬಾವುಟ ಹಾಕಿದ್ದನ್ನು ಪದೇಪದೇ ತೋರಿಸುತ್ತಿವೆ' ಎಂದು ಟೀಕಿಸಿದರು.
PublicNext
29/01/2021 08:33 pm