ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮತ್ತೆ ಉದ್ಧಟತನ ತೋರಿದ ಉದ್ಧವ್: ಗಡಿ ಬಗ್ಗೆ ಸಾಕ್ಷ್ಯಚಿತ್ರ ಬಿಡುಗಡೆ

ಬೆಳಗಾವಿ: ಗಡಿ ವಿಚಾರವಾಗಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಪದೇ ಪದೇ ಕಾಲು ಕೆರೆದು ಕ್ಯಾತೆ ತೆಗೆಯುತ್ತಿದ್ದಾರೆ‌. ಈ ವಿವಾದವನ್ನು ಜೀವಂತವಾಗಿಟ್ಟು ರಾಜಕೀಯ ದುರುದ್ದೇಶಗಳನ್ನು ಈಡೇರಿಸಿಕೊಳ್ಳುವ ಹಂತಕ್ಕೆ ಅಲ್ಲಿನ ಸಿಎಂ ಇಳಿದಿದ್ದಾರೆ ಅನ್ನೋದು ಕನ್ನಡ ಪರ ಸಂಘಟನೆಗಳ ಆಕ್ರೋಶ.

ಈ ನಡುವೆ ಮತ್ತೆ ಕ್ಯಾತೆ ತೆಗೆದಿರುವ ಉದ್ಧವ್ ಠಾಕ್ರೆ ಗಡಿ ವಿವಾದದ ಕುರಿತು ಯೂಟ್ಯೂಬ್ ನಲ್ಲಿ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ್ದಾರೆ‌. ಜನವರಿ 27ರಂದು ಯೂಟ್ಯೂಬ್ ನಲ್ಲಿ ಅಪ್ಲೋಡ್ ಆದ ಈ ಸಾಕ್ಷ್ಯಚಿತ್ರದಲ್ಲಿ ಕರ್ನಾಟಕದ ಗಡಿ ಭಾಗದಲ್ಲಿ ಮಾರಾಠಾ ಕುರುಹುಗಳ ಬಗ್ಗೆ ಮಾಹಿತಿ ಇದೆ. ಆದ್ರೆ ಅದರಲ್ಲಿನ ಕುರುಹುಗಳು ಸಂಪೂರ್ಣ ಸತ್ಯವಾ? ಎಂಬ ಪ್ರಶ್ನೆಗಳು ಎದ್ದಿವೆ. ಒಟ್ಟಿನಲ್ಲಿ ಸಾಕ್ಷ್ಯಚಿತ್ರ ಬಿಡುಗಡೆ ಮಾಡುವ ಮೂಲಕ ಉದ್ಧವ್ ಠಾಕ್ರೆ ಮತ್ತೊಮ್ಮೆ ಕನ್ನಡಿಗರನ್ನು ಕೆಣಕಿದ್ದಾರೆ‌.

Edited By : Nagaraj Tulugeri
PublicNext

PublicNext

29/01/2021 05:20 pm

Cinque Terre

55.37 K

Cinque Terre

7

ಸಂಬಂಧಿತ ಸುದ್ದಿ