ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟಿಎಂಸಿಗೆ ಮತ್ತೊಂದು ವಿಘ್ನ: ಪಕ್ಷ ತೊರೆದ ರಾಜೀವ್ ಬ್ಯಾನರ್ಜಿ

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿ ಟಿಎಂಸಿಗೆ ಒಂದಾದ ಮೇಲೊಂದರಂತೆ ವಿಘ್ನ ಬಂದು ಅಪ್ಪಳಿಸುತ್ತಲೇ ಇದೆ. ಮಮತಾ ಬ್ಯಾನರ್ಜಿ ಸರ್ಕಾರದ ಸಚಿವರು ಒಬ್ಬೊಬ್ಬರಾಗಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಪಕ್ಷ ತೊರೆಯುತ್ತಿದ್ದಾರೆ.

ಜನವರಿ 22 ರಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಜೀವ್ ಬ್ಯಾನರ್ಜಿ ಇದೀಗ ಟಿಎಂಸಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀವ್​ ಶೀಘ್ರದಲ್ಲೇ ಬಿಜೆಪಿಗೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ.

ಇತ್ತೀಚೆಗಷ್ಟೇ ಸುವೆಂದು ಅಧಿಕಾರಿ ಹಾಗೂ ಅವರ ಸಹೋದರ ಪಕ್ಷ ತೊರೆದು ಬಿಜೆಪಿ ಸೇರಿದ್ದರು. ಇದೀಗ ರಾಜೀವ್ ಅವರ ರಾಜೀನಾಮೆಯೂ ಪಕ್ಷಕ್ಕೆ ಭಾರಿ ಹಿನ್ನಡೆಯನ್ನುಂಟು ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ಶತಾಯಗತಾಯ ಕೇಸರಿ ಸರ್ಕಾರ ರಚಿಸಬೇಕೆಂದು ಪಣ ತೊಟ್ಟಿರುವ ಬಿಜೆಪಿಗೆ ಟಿಎಂಸಿ ಈ ಬೆಳವಣಿಗೆ ಸಹಕಾರಿಯಾಗಲಿದೆ.

Edited By : Nagaraj Tulugeri
PublicNext

PublicNext

29/01/2021 03:41 pm

Cinque Terre

40.06 K

Cinque Terre

3

ಸಂಬಂಧಿತ ಸುದ್ದಿ