ಲಕ್ನೋ: ದೆಹಲಿಯಲ್ಲಿ ಜನವರಿ 26ರಂದು ಹಿಂಸಾಚಾರ ನಡೆದ ಬೆನ್ನಲ್ಲೇ ಉತ್ತರ ಪ್ರದೇಶದ ಸರ್ಕಾರವು ಎಚ್ಚೆತ್ತುಕೊಂಡಿದೆ. ಈ ಮೂಲಕ ರಾಜ್ಯದ ಮೂರು ಸ್ಥಳಗಳಲ್ಲಿ ನಡೆಯುತ್ತಿರುವ ಧರಣಿಗಳನ್ನು ತೆರವುಗೊಳಿಸಿದೆ.
ಉತ್ತರ ಪ್ರದೇಶದಲ್ಲಿಯೂ ಹಿಂಸಾಚಾರದ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಯೋಗಿ ಆದಿತ್ಯನಾಥ್ ಅವರ ಸರ್ಕಾರವು ಈ ಕ್ರಮ ಕೈಗೊಂಡಿದೆ. ಚಿಲ್ಲಾ ಗಡಿ, ನೋಯ್ಡಾದ ರಾಷ್ಟ್ರೀಯ ಪ್ರೇರಣಾ ಸ್ಥಳ ಮತ್ತು ಹಸಿರು ಉದ್ಯಾನ ಹಾಗೂ ಬಾಗ್ಪತ್ನ ಬರೌತ್ನಲ್ಲಿ ರೈತರು ಧರಣಿ ನಡೆಸುತ್ತಿದ್ದರು. ಆದರೆ ಈಗ ಅವರಿಗೆ ನೀಡಲಾಗಿದ್ದ ಅನುಮತಿಯನ್ನು ಯೋಗಿ ಸರ್ಕಾರ ವಾಪಸ್ ಪಡೆದಿದೆ.
ಧರಣಿ ನಿರತರನ್ನು ಅಲ್ಲಿಂದ ತೆರವುಗೊಳಿಸಲು ಪೊಲೀಸ್ ಪ್ರಯೋಗ ಆಗಲಿಲ್ಲ. ಅನುಮತಿ ಹಿಂಪಡೆಯುತ್ತಿದ್ದಂತೆ ರೈತರೇ ಜಾಗ ಖಾಲಿ ಮಾಡಿ ಹೋಗಿದ್ದಾರೆ. ಆದರೆ ಕೆಲವರು ಗಲಾಟೆ ಶುರು ಮಾಡಲು ಪ್ರಯತ್ನಿಸಿದರು. ಆದರೆ ಈಗ ಅವರೆಲ್ಲ ನಾಪತ್ತೆಯಾಗಿದ್ದು, ಪತ್ತೆ ಕಾರ್ಯ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
PublicNext
28/01/2021 07:36 pm