ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿ ದೇಶವನ್ನು ಲಂಕೆ ಸುಟ್ಟಂತೆ ಸುಡುತ್ತಿದೆ: ದೀದಿ ವಾಗ್ದಾಳಿ

ಕೋಲ್ಕತ್ತಾ: ಬಿಜೆಪಿ ಈ ದೇಶವನ್ನ ಲಂಕೆ ಸುಟ್ಟಂತೆ ಸುಡುತ್ತಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.

ಪಶ್ಚಿಮ ಬಂಗಾಳ ಸರ್ಕಾರವು ಇಂದು ಅಧಿವೇಶನದಲ್ಲಿ ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಿರ್ಣಯ ಮಂಡಿಸಿತು. ಈ ಬೆನ್ನಲ್ಲೇ ಮಾತನಾಡಿದ ದೀದಿ, ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತೇವೆ. ಬಿಜೆಪಿ ಪ್ರತಿಯೊಂದು ಹೋರಾಟವನ್ನೂ ಭಯೋತ್ಪಾದಕ ಚಟುವಟಿಕೆ ಎಂಬಂತೆ ನೋಡುತ್ತಿದೆ. ರಾಮಾಯಣದಲ್ಲಿ ಲಂಕಾ ಖಂಡವನ್ನ ಸುಟ್ಟಂತೆ ಇಡೀ ದೇಶವನ್ನು ಸುಡುತ್ತಿದೆ. ಈ ಕಾನೂನು ಸಂಪೂರ್ಣವಾಗಿ ರೈತ ವಿರೋಧಿ. ಈ ಹೋರಾಟದಲ್ಲಿ ನಾವು ರೈತರೊಂದಿಗೆ ಇದ್ದೇವೆ ಎಂದು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

28/01/2021 03:42 pm

Cinque Terre

80.04 K

Cinque Terre

18