ಚಿಕ್ಕೋಡಿ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಬೆಳಗಾವಿ ಕೇಂದ್ರಾಡಳಿತ ಪ್ರದೇಶ ಮಾಡಿಕೊಳ್ಳುತ್ತೇವೆ ಎಂದರೆ ನಾವು ಸುಮ್ನೆ ಕೈಕಟ್ಟಿ ಕುಳಿತುಕೊಂಡಿಲ್ಲ ಎಂದು ಸಚಿವೆ ಶಶಿಕಲಾ ಜೊಲ್ಲೆ ಗುಡುಗಿದರು.
ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೊರಗಾಂವ್ ಪಟ್ಟಣದಲ್ಲಿ ಬಸ್ ತಂಗುದಾಣ ಉದ್ಘಾಟನೆ ಬಳಿಕ ಮಾತನಾಡಿದ ಅವರು, ನಾನು ಕರ್ನಾಟಕದವಳು, ಇಲ್ಲೇ ಹುಟ್ಟಿ ಬೆಳೆದವಳು. ಯಾರೋ ಈ ರೀತಿಯ ಉದ್ಧಟತನದ ಹೇಳಿಕೆ ಕೊಟ್ಟಾಗ ನಾವು ಸುಮ್ಮನಿರೋಕೆ ಆಗಲ್ಲ. ಆದರೆ, ಈ ವಿಚಾರ ಕೋರ್ಟ್ನಲ್ಲಿ ಇರುವುದರಿಂದ ನಾವು ಸುಮ್ಮನಿದ್ದೇವೆ ಅಷ್ಟೇ ಎಂದರು. ಸಿಎಂ ಉದ್ಧವ್ ಠಾಕ್ರೆ ಪದೇ ಪದೇ ಇಂತಹ ಹೇಳಿಕೆಗಳನ್ನು ಕೊಡುತ್ತಲೇ ಇದ್ದಾರೆ. ಇದಕ್ಕೆ ನಾವು ಸುಮ್ಮನೆ ಕೈ ಕಟ್ಟಿ ಕುಳಿತುಕೊಳ್ಳುವುದಿಲ್ಲ. ಏನ್ ಮಾಡ್ಬೇಕೋ, ಮಾಡುತ್ತೇವೆ. ಠಾಕ್ರೆಗೆ ಬೆಳಗಾವಿ ಬಗ್ಗೆ ಮಾತನಾಡುವ ಯಾವುದೇ ಅಧಿಕಾರ ಇಲ್ಲ ಎಂದು ಶಶಿಕಲಾ ಜೊಲ್ಲೆ ಗುಡುಗಿದ್ದಾರೆ.
PublicNext
27/01/2021 07:03 pm