ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಗ್ ಟ್ವಿಸ್ಟ್: ಪ್ರತಿಭಟನೆಯಿಂದ ಹಿಂದೆ ಸರಿದ 2 ರೈತ ಸಂಘಟನೆಗಳು

ನವದೆಹಲಿ: ವಿವಾದಿತ ಮೂರು ಕಾನೂನು ಹಿಂಪಡೆಯುವಂತೆ ದೆಹಲಿಯಲ್ಲಿ ಮಂಗಳವಾರ ನಡೆದ ಹಿಂಸಾಚಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇತ್ತ ಟ್ರ್ಯಾಕ್ಟರ್ ಪೆರೇಡ್ ವೇಳೆ ನಡೆದ ಹಿಂಸಾಚಾರದ ಬಳಿಕ ರೈತ ಒಕ್ಕೂಟದಲ್ಲೇ ಒಡಕು ಮೂಡಿರುವುದು ತಿಳಿದುಬಂದಿದೆ.

‘ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಘಟನ್’ ಮತ್ತು ‘ಭಾರತೀಯ ಕಿಸಾನ್ ಯೂನಿಯನ್’ ಪ್ರತಿಭಟನೆಯಿಂದ ಹಿಂದೆ ಸರಿದಿರುವುದಾಗಿ ಹೇಳಿವೆ. ಈ ಬಗ್ಗೆ ಮಾತನಾಡಿರುವ ಸಂಘಟನೆಯ ಮುಖ್ಯಸ್ಥ ವಿ.ಎಂ.ಸಿಂಗ್, ''ಯಾರ ಹಾದಿ ಬೇರೆಯದ್ದೇ ಆಗಿದೆಯೋ ಅಂತಹವರೊಂದಿಗೆ ನಾವು ಪ್ರತಿಭಟನೆಯಲ್ಲಿ ಮುಂದುವರಿಯಲಾಗದು. ಹೀಗಾಗಿ ಅವರಿಗೆ ಒಳಿತನ್ನು ಹಾರೈಸುತ್ತೇನೆ. ಆದರೆ ನಾನು ಮತ್ತು ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಘಟನ್ ಪ್ರತಿಭಟನೆಯಿಂದ ಹಿಂದೆ ಸರಿಯುತ್ತಿದ್ದೇವೆ'' ಎಂದು ಹೇಳಿದ್ದಾರೆ.

ಜನರನ್ನು ಹುತಾತ್ಮರನ್ನಾಗಿಸಲು ಅಥವಾ ಥಳಿಸಲು ನಾವಿಲ್ಲಿಗೆ ಬಂದಿಲ್ಲ. ಕನಿಷ್ಠ ಬೆಂಬಲ ಬೆಲೆಯ ಖಾತರಿ ಸಿಗುವವರೆಗೂ ನಮ್ಮ ಪ್ರತಿಭಟನೆ ಮುಂದುವರಿಯಲಿದೆ. ಆದರೆ ಈಗ ನಡೆಯುತ್ತಿರುವ ರೀತಿಯ ಪ್ರತಿಭಟನೆ ನಮ್ಮದಲ್ಲ ಎಂದು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

27/01/2021 06:54 pm

Cinque Terre

106.95 K

Cinque Terre

12

ಸಂಬಂಧಿತ ಸುದ್ದಿ